ನಾಮವ ನುಡಿಸು
ಕವನ
ಶುಭ ನವರಾತ್ರಿಯ ಸಡಗರದಲ್ಲಿ
ಬಲು ಹಿತವೆನಿಸುವ ಸಂಭ್ರಮದಲ್ಲಿ
ಸ್ಕಂದ ಮಾತೆಗೆ ಮಣಿಯುವ ಬನ್ನಿ
ಜಗದಂಬಿಕೆಗೆ ಜಯ ಜಯವೆನ್ನಿ
ಸ್ಕಂದನ ಮಾತೆಯೆ ಕರುಣಾ ಮೂರುತಿ
ಜಗದಲಿ ಹರಡಿದೆ ನಿನ್ನಯ ಕೀರುತಿ
ಶುಭ ನವರಾತ್ರಿಯ ಐದನೆ ದಿನವು
ದರುಶನ ಭಾಗ್ಯಕೆ ಕಾದಿದೆ ಮನವು
ನಂಬಿದ ಭಕ್ತರ ಪ್ರೇಮದಿ ಪೊರೆವೆ
ಬಯಸಿದ ಮಡಿಲಿಗೆ ಕುಡಿಯನ್ನೀವೆ
ಬೇಡಿದ ಭಕ್ತರಿಗಿಂಬನು ಕೊಡುವೆ
ತಾಯಿಯೆ ನಿನ್ನಯ ಚರಣಕೆ ಮಣಿವೆ
ಮಾಡಿದ ತಪ್ಪನು ಮನ್ನಿಸು ತಾಯೆ
ಪಾಪದ ಹೊರೆಯನು ಕರುಣದಿ ಕಳೆಯೆ
ನಿನ್ನಯ ಕರುಣೆಯ ಕಿರಣವ ಹರಿಸು
ರಸನದಿ ನಿನ್ನಯ ನಾಮವ ನುಡಿಸು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್