ನಾಯಿ ನೆರಳು
ನಾನು ಇತ್ತೀಚಿಗೆ ಓದಿದ ಕಾದಂಬರಿ S. L ಭೈರಪ್ಪ ರವರ ನಾಯಿ ನೆರಳು ಬಹಳ ಹಿಡಿಸಿ ಬಿಟ್ಟಿತು. ಅವರ ಭಾಷ ಪಾಂಡಿತ್ಯ ಓದುಗನನ್ನು ಕಥೆಯಲ್ಲಿ ಒಂದು ಪಾತ್ರವಾಗಿಸಿಬಿಡುತ್ತೆ !!! 1 9 6 8 ರಲ್ಲಿ ಬರೆದ ಪಾತ್ರಗಳು, ಊರಿನ ವಿವರಣೆ ... ನಾವು ಈಗಿರುವ ಕಾಲ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮರೆಸಿ , ನಮ್ಮನ್ನು ಸಮಯದಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ.. ನಾಯಿ ನೆರಳನ್ನು ನಾನು ಅರ್ಥ ಮಾಡಿಕೊಂಡಿರುವ ಪರಿಯನ್ನು ನನ್ನ ಗೆಳೆಯರೊಡನೆ ಹಂಚಿಕೊಳ್ಳುವ ಆಸೆ !!!
ಕಥಾನಾಯಕ ವಿಶ್ವ ತನ್ನ ಚಿಕ್ಕ ವಯಸ್ಸಿನಿಂದ ತನಗೊಬ್ಬಳು ಹೆಂಡತಿ ಮತ್ತು ಒಂದು ವರ್ಷದ ಗಂಡು ಮಗುವೊಂದಿದೆ ಎಂದು ಹೇಳುತ್ತಿರುತ್ತಾನೆ .. ಮೊದ ಮೊದಲು ಮನೆಯವರು ಅದನ್ನು ಹಾಸ್ಯವಾಗಿ ಪರಿಗಣಿಸಿ ನಕ್ಕು ಸುಮ್ಮನಾಗಿಬಿಡುತ್ತಿರುತ್ತಾರೆ ... ಕ್ರಮೇಣ ಅವನು ಪ್ರಾಪ್ತ ವಯಸ್ಸು 1 5 ದಾಟಿದ ಮೇಲೂ ಅದೇ ಹೆಂಡತಿ ಮಗುವಿನ ವಿಷ ಯವನ್ನು ಹೇಳುತ್ತಿರಲು ... ಮದುವೆಗೆ ಹೆಣ್ಣು ಸಿಗುವುದೇ ದುಸ್ತರವಾಗುತ್ತೆ .. ಊರಿನ ಜನ ಗಾಳಿ, ದೆವ್ವ ಪಿಚಾಚಿ ಹಿಡಿದಿದೆ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ ... ವಿಶ್ವ ಅವನ ಈ ರೀತಿಯಾದ ಗುಣದಿಂದ ಮನೆಯವರ ಅಸಡ್ಡೆಗೆ ಗುರಿಯಾಗುತ್ತಾನೆ. ಅವನ ಜೊತೆಗಾರನಾಗಿ ಕೇವಲ ಒಂದು ನಾಯಿ ಮಾತ್ರ ಇರುತ್ತೆ. ಬ್ರಾಹ್ಮಣ ವಂಶದಲ್ಲಿ ಹುಟ್ಟಿದ ಅವನು ನಾಯಿಯನ್ನು ಮುಟ್ಟುವುದು ಅದರ ಜೊತೆ ಕೂಡಿ ಆಡುವುದು ಮನೆಯಲ್ಲಿರುವರಿಗೆ ಅಸಮಧಾನದ ವಿಷಯ!!!!
ಅಚ್ಚನ್ನಯ್ಯ ಎಂಬ ಹಣ್ಣು ಹಣ್ಣು ಮುದುಕ ಒಂದು ಬಾರಿ ಪರ ಊರಿನಿಂದ ವಿಶ್ವನ ಮನೆಗೆ ಬರುತ್ತಾನೆ. ವಿಶ್ವನ ಅಪ್ಪನ ಬಳಿ ನನ್ನ ಮಗ 2 0 ವರ್ಷದ ಹಿಂದೆ ಗತಿಸಿದ್ದಾನೆ.. ನಿಮ್ಮ ಮಗನಾಗಿ ಹುಟ್ಟಿ ಬಂದಿದ್ದಾನೆ .. ಅವನು ಆಡುವ ಪ್ರತಿಯೊಂದು ಮಾತುಗಳು ನನ್ನ ಸಂಸಾರದ ವಿಷಯವೇ .. ನನ್ನ ಹೆಂಡತಿ ಮತ್ತು ಸೊಸೆ ಮನೆಯಲ್ಲಿ ಕೊರಗುತಿದ್ದಾರೆ .. ಅವನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಎo ದಾಗ ವಿಶ್ವ ಬoದ ಮುದುಕನನ್ನು ಅಪ್ಪ ಎoದು.. ಅವರ ಊರು ಕೇರಿ ವಿಷಯ ಸಂಪೂರ್ಣವಾಗಿ ಗೊತ್ತಿರುವ ಹಾಗೆ ಮಾತಾಡಿ ... ಮುದುಕನ ಜೊತೆ ಹೊರಡಲು ಸಮ್ಮತಿ ಸೂಚಿಸಿ ಹೊರಟೇ ಬಿಡುತ್ತಾನೆ .. ಅವನ ಅಚ್ಚು ಮೆಚ್ಚಿನ ನಾಯಿ ಕೂಡ ಹೊರಟು ಬಿಡುತ್ತೆ ..
ಈ ಕಡೆ ಅಚ್ಚನ್ನಯನ ಸೊಸೆ " ವೆಂಕ" ತನ್ನ ವಿಧವೆ ಬಾಳನ್ನು ಮೌನದಿಂದ ನಡೆಸುತ್ತಿರುತ್ತಾಳೆ .. ಧುತ್ತೆಂದು ಮರಣಿಸಿದ ಪತಿ ಮತ್ತೆ ಹುಟ್ಟಿ ಬಂದಿದ್ದಾನೆ ಎಂದಾಗ ಅವಳು ಆತಂಕ , ನಾಚಿಕೆ, ಮೌನದ ಮೊರೆ ಹೊಗುತ್ತಾಳೆ .. ವಿಧವಾ ವಿವಾಹ ಜಾರಿಯಿಲ್ಲದ ಕಾಲದಲ್ಲಿ ಯಾರನ್ನೋ ಪತಿಯೆಂದು ಒಪ್ಪಿಕೊಳ್ಳುವುದು ಕಷ್ಟ ಸಾದ್ಯವೇ ಸರಿ. ಆದರೂ ಮನೆಯವರ ಪುತ್ರ ವಾತ್ಸಲ್ಯ .. ಗ್ರಾಮದೇವತೆಯ ಒಪ್ಪಿಗೆ ಪಡೆದು ತನ್ನ ದಾಂಪತ್ಯವನ್ನು ಮತ್ತೆ ಶುರು ಮಾಡಿಬಿಡುತ್ತಾಳೆ !!! ವೆಂಕನ ಮಗ ಬೆಂಗಳೂರಿನಲ್ಲಿ ವಿಜ್ಞಾನ ಪದವಿ ಓದುತಿದ್ದು .. ತಾತನ ಪತ್ರದಲ್ಲಿ ಬo ದ ಸುದ್ದಿ ಓದಿ ಗರಬಡಿದವನಾಗುತ್ತಾನೆ !!! ತಂದೆಯ ಮುಖವೇ ನೋಡದ ಅವನು ಮತ್ತೆ ಹುಟ್ಟಿ ಬಂದಿದ್ದಾನೆ ಎಂಬುದನ್ನೂ ಅರಗಿಸಿಕೊಳ್ಳಲಾಗದೆ ಕೋಪದಿಂದ ಕುದಿಯುತ್ತಾನೆ. .ತಾತ ಅಜ್ಜಿ ಮತ್ತು ಸ್ವಂತ ತಾಯಿಗೆ ಇಲ್ಲಿ ಮೋಸವಾಗುತ್ತಿದೆ ... ವಿಶ್ವನ ಮೇಲೆ ಕೋರ್ಟ್ ಕೇಸ್ ಹಾಕಲು ಹವಣಿಸುತ್ತಾನೆ ..
ವಿಶ್ವನ ಜೊತೆ ಬಂದ ನಾಯಿ ಹತ್ತಿರ ಆಡುವುದು .. ಅವನೂ ನಾಯಿಯೂ ಒಂದೇ ಜೀವ ಎರಡು ದೇಹಗಳೇ ಅನ್ನುವ ಹಾಗಿರುತ್ತಾರೆ ... ಬೆಂಗಳೂರಿನಿಂದ ಬಂದ ಮಗನಿಗೆ 1 8 ವರುಷ ... ತಂದೆಯಾಗಿ ಮತ್ತೆ ಹುಟ್ಟಿ ಬಂದ ವಿಶ್ವನಿಗೆ 1 7 ವರುಷ !! ಮಗ ತಂದೆಗಿಂತ ದೊಡ್ದವನಾಗಿರುತ್ತಾನ ಎಂದು ತಾತನ ಹತ್ತಿರ ವಾದ ಕೂಡ ಮಾಡುತ್ತಾನೆ. ನಿನ್ನ ತಂದೆ ಈಗ ಬದುಕಿದ್ದರೆ ಅವನಿಗೆ 4 2 ಅಗಿರುತಿತ್ತು.. ಆದರೆ ವಿಧೀ ವಶಾತ್ ಸತ್ತು ಮತ್ತೆ ಬಂದಿರುವುದು ನಮ್ಮ ಪುಣ್ಯ ಎಂಬ ವಾದ ತಾತನದು !!! ಮೊಮ್ಮಗ ಒಂದು ಲಾಯರ್ ಸಹಾಯ ಯಾಚಿಸಿ ವಿಶ್ವನ ಮೇಲೆ ಕೇಸು ಹಾಕಿ ಮೋಸಗಾರ ಎಂದು ಜೈಲಿಗೆ ಕೂಡ ಹಾಕಿಸಿಬಿಡುತ್ತಾನೆ. ವಿಷಯ ತಿಳಿದ ಅಜ್ಜಿ ಎದೆ ಒಡೆದು ಪ್ರಾಣ ಬಿಡುತ್ತಾಳೆ !! ವಿಶ್ವನ ಜೊತೆ ಹೋದ ನಾಯಿಯನ್ನು ಜೈಲಿನಲ್ಲಿ ಒಳಗೆ ಬಿಡುವುದಿಲ್ಲ ... ಆದು ವಿಚಿತ್ರವಾಗಿ ಕೂಗಿ ಪ್ರಾಣ ಬಿಟ್ಟು ಬಿಡುತ್ತೆ .. ತಾತ ಮತ್ತು ಸೊಸೆ ವೆಂಕ ಹೇಗಾದರೂ ಸರಿ ವಿಶ್ವನನ್ನು ಜೈಲಿನಿಂದ ಬಿಡಿಸಿ ತರಬೇಕೆಂದು ಬೆಂಗಳೂರಿಗೆ ಬರುತ್ತಾರೆ.. .. ವಿಶ್ವ ನನಗೆ ಯಾರ ಜೊತೆಯೂ ಸಂಬಂದವಿಲ್ಲದವರಂತೆ ವರ್ತಿಸಿ ಭೈರಾಗಿಯಂತೆ ಸದಾ ಕಾಲ ತಪಸ್ಸಿಗ್ಗೆ ಕುಳಿತವನಂತೆ ಧ್ಯಾನಮಗ್ನ ನಾಗಿರುತ್ತಾನೆ.. ವಿಶ್ವನಿಂದ ಬಸಿರಾದ ವೆಂಕ ನಾಚಿಕೆ ದುಖ ಅವಮಾನಗಳಿಂದ ಮಾವನ ಮನೆ ಬಿಟ್ಟು ಹೋಗಿ
ಬಿಡು ತ್ತಾ ಳೆ. .. ಅಜ್ಜಿಯನ್ನು ಸಾಯಿಸಿ , ಅಮ್ಮನನ್ನು ಮನೆ ಬಿಡಿಸಿ ಊರಿನವರ ಕೋಪಕ್ಕೆ ಬಲಿಯಾಗುತ್ತಾನೆ ಮೊಮ್ಮಗ ಹೀಗೆ ಕಥೆ ವೆಂಕ ತನಗೆ ಹುಟ್ಟಿದ ಮಗುವನ್ನು ಒಬ್ಬಂಟಿಯಾಗಿ ಸಾಕುವಲ್ಲಿ ಕಥೆ ಮುಗಿಯುತ್ತೆ.
ವಿಶ್ವನ ಜೊತೆ ಇದ್ದ ನಾಯಿ ಯಾರು ?? ಮುದುಕನ ಮಗನಾಗಿ ಸತ್ತಿದ್ದ ... ನಾಯಿಯಾಗಿ ಹುಟ್ಟಿದನೇ ????ಪುನರ್ಜನ್ಮ ... ವಿಧವಾವಿವಾಹ, ಸಂಪ್ರದಾಯಗಳು , ಕರ್ಮ ಫಲಗಳು ನಂಬಿಕೆಗಳ ಬಗ್ಗೆ ಸದಾ ಕಾಲ ಯೋಚಿಸಿ ಯೋಚಿಸಿ ನಮ್ಮ ತಲೆ ಕಲಸುಮೇಲೊಗರವಾಗುವುದು ಖಂಡಿತಾ !
Comments
ಈ ಪುಸ್ತಕದ ಬಗೆಗೆ ಕೇಳಿರುವೆನಾದರೂ
ಈ ಪುಸ್ತಕದ ಬಗೆಗೆ ಕೇಳಿರುವೆನಾದರೂ, ಇದನ್ನು ಎಂದೂ ಓದಿರಲಿಲ್ಲ. ಒಂದು ವಿಶಿಷ್ಠ ಪುಸ್ತಕ ಅದರಲ್ಲೂ ಎಸ್. ಎಲ್. ಭೈರಪ್ಪನವರ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸ್ಮಿತಾ ಅವರೆ.