ನಾಯಿ ಮತ್ತು ಬಾಲ

ನಾಯಿ ಮತ್ತು ಬಾಲ

ಕವನ

ನಾಯಿಗಳು ತಮ್ಮ ಮಾತನ್ನೇ

ಸಮರ್ಥಿಸಿಕೊಳ್ಳುತ್ತವೆ

ಬಾಲ ಡೊಂಕಾದರೂ

ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು

ಪ್ರಾಯವಾದರೂ ಸಹ ?

ಊಟವಾಯ್ತೇಯೆಂದು ಕೇಳಿದರೆ

ಮುಂಡಾಸು ಮೂವತ್ತು

ಮಳ ಎನ್ನುವ ನೀರು ನಾಯಿಗಳು !

 

ಅಪ್ಪ ನೆಟ್ಟಿರುವ ಆಲದ ಮರಕ್ಕೇ

ಸುತ್ತು ಹೊಡೆಯುವ ಮಗನಂತೆ ,ಕೊನೆಗೆ ಮಂಗನಂತೆ ಹಳೆಯಕಾಲದ ಗೆಲ್ಲನ್ನೇ ಹಿಡಿದು

ಜೋಕಾಲಿ ಹೊಡೆಯುತ್ತೇನೆ ಎನ್ನುವ ಹಳೆ ಕಬ್ಬಿಣ ತಾಮ್ರಗಳಿಗೆ ಎನೆನ್ನೋಣ ?

ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳದವರನ್ನು ಯಾವುದೇ ಮೇನೆಯಲ್ಲಿ ಕೂರಿಸಿದರೂ ನೆಲದಲ್ಲೇ ಎಲ್ಲವನ್ನೂ ಮಾಡುವುದ ಬಿಡುವುದೂ ಇಲ್ಲ !

 

ಈ ಕಂಪ್ಯೂಟರ್ ಯುಗದಲ್ಲಿ ನಿಮ್ಮ ಲಾಟುಪೋಟ್ ಉಪದೇಶ ಯಾರಿಗೆ ಬೇಕಯ್ಯಾ

ಸೃಜನಶೀಲತೆ ಇಲ್ಲದ ನಿಮ್ಮ ಬರಹಗಳ ನಾಯಿಗಳೂ ಮೂಸವು ,ಇನ್ನು ಮನುಷ್ಯರೆಲ್ಲಿಂದ ಮೂಸಿಯಾವು ? ಅದಕ್ಕೆಂದು ತೋರುತ್ತದೆ ಬರೆದ ಸಾಹಿತ್ಯಗಳೆಲ್ಲ ರಾಶಿ ರಾಶಿ ಪುಸ್ತಕದ ರೂಪದಲ್ಲಿ ಮನೆಯಲ್ಲೇ ಕೊಳೆಯುತ್ತಾ ಬಿದ್ದಿದೆ !

 

ದ್ವೇಷ ಭಾವನೆಯಿರುವ ಜನ

ಕವಿಗಳಾಗಲು ಸಾಧ್ಯವೇ? ಕವಿಗಳ ಜೊತೆಗೇ ಹೊಂದಾಣಿಕೆಯಿಲ್ಲದವರ ಕಪಿಗಳೆನ್ನದೆ ಇನ್ನೇನೆಂದು ಹೇಳಲಿ?

ಮರುಜನ್ಮದಲ್ಲಾದರೂ ಸತ್ಯ, ನಿಷ್ಠೆ ,ಪ್ರಮಾಣಿಕತೆ ಹೊಂದಿರುವ ಗುಣಗಳ ಹೊಂದಿದ ನರನೋ ನಾಯಿಯ ಜನುಮದಲಿ ಬಾಯೆನುತ ಅನ್ನುತ್ತಾ ;

ವಂದನೆಯ ಹೇಳುತ್ತಾ ವಿರಮಿಸುತ್ತಿರುವೆ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್