ನಾಲ್ಕನೇ ಅವಸ್ಥೆ
ಕವನ
ಅಂತರ್ಚಕ್ಷುವಿರುವ ಅವಸ್ಥೆಯಲ್ಲ, ಬಹಿರ್ಚಕ್ಶುವಿರುವ ಅವಸ್ಥೆಯಲ್ಲ.
ಅಂತರ್ಬಹಿರ್ಚಕ್ಶುಗಳೆರಡೂ ಇರುವ ಇಲ್ಲದ ಅವಸ್ಥೆಯದಲ್ಲ, ನಿದ್ರಾವಸ್ಥೆಯೂ ಅಲ್ಲ.
ಜಾಗ್ರತ್ಸ್ವಪ್ನಸುಶುಪ್ತಾವಸ್ಥೆಯೂ ಇದಲ್ಲ.
ವೈಶ್ವಾನರ, ತೈಜಸ ಪ್ರಾಜ್ನಾವಸ್ಥೆಯ ಪಾದವೂ ಅಲ್ಲ.
ಅನುಭವವಿರುವ ಅನುಭವವಿರದೆ ಇರುವ ಅವಸ್ಥೆಯೂ ಅಲ್ಲ.
ಕಂಗಳಿಗೆ ಕಾಣದ ಗ್ರಹಿಸಲಾಗದ ಸ್ಪರ್ಶಿಲಾಗದ ಅವಸ್ಥೆಯದು.
ಹೆಗ್ಗುರುತಿಲ್ಲದ ಕಲ್ಪಿಸಲಾಗದ ಶಬ್ದಕೆ ನಿಲುಕದ ಅವಸ್ಥೆಯದು.
ಇಹವಳಿದು ಚೇತನವೊಂದೇ ಇರುವ ಅವಸ್ಥೆಯದು.
ಶಾಂತನಾದ ಶಿವನೋರ್ವನೇ ಇರುವ ಅದ್ವೈತಾವಸ್ಥೆ ತುರಿಯಾವಸ್ಥೆಯದು.
ತಿಳಿದವರು ಪೇಳ್ವರು ನಾಲ್ಕನೇ ಅವಸ್ಥೆ ಇದೇ ಎಂದು ಆತ್ಮನಿವನೇ ಎಂದು.
ಇವನೇ ಆ ಆತ್ಮನು, ಆ ಚೇತನವು ಎಂದು ನಾ ತಿಳಿಯಬೇಕಿರುವುದು|| ೭ ||
Extracts of ನಾ ಕಂಡಂತೆ ಚೇತನ – ಭಾಗ ೬ – ಮಾಂಡುಕ್ಯೋಪನಿಷತ್ © ಸಾಯಿನಾಥ ಬಾಲಕೃಷ್ಣ, ಬೆಂಗಳೂರು.
Comments
ಉ: ನಾಲ್ಕನೇ ಅವಸ್ಥೆ
_/\_