ನಾಲ್ಕು ಕಾಲಿನ ರಸ್ತೆ,

ನಾಲ್ಕು ಕಾಲಿನ ರಸ್ತೆ,

ದೈತ್ಯ ದೇಶವ ಹೊತ್ತು 
ನಡೆಯುತಿದೆ 
ನಾಲ್ಕು ಕಾಲಿನ ರಸ್ತೆ,
ಏರಿಳಿತಗಳೇ ಇಲ್ಲದೇ, 

ಇದ್ದ-ಬದ್ದ ಗದ್ದೆಯನೆಲ್ಲ 
ನುಂಗಿ ನೀರು ಕುಡಿದು,,,,,

ತೆನೆ ಹೊತ್ತು-ಹಡೆಯುವ 
ಬಾಣಂತಿಯರ ಹೊಟ್ಟೆಗೆ 
ಬೆಂಕಿ ಇಟ್ಟು,,,,,,,

ಕಬ್ಬಿನ ಹೊಲದಲಿ 
ಕಬ್ಬಿಣ ಹೊತ್ತು,,,,,

ಲಕ್ಷಾಂತರ ಜೀವಂತ 
ಹೆಣಗಳನು, 
ಒಂದೇ ಬಾರಿಗೆ ಹೊತ್ತು,,,,,

ನಡೆಯುತಿದೆ 
ನಾಲ್ಕು ಕಾಲಿನ ರಸ್ತೆ,
ಏರಿಳಿತಗಳೇ ಇಲ್ಲದೇ,,,,,

ಅಭಿವೃದ್ದಿ ಇದರ ವಯ್ಯಾರ,,,,,,

ಮುಂದೊಂದು ದಿನ, 
ಬರಿಯ ರಸ್ತೆಗಳೇ ತುಂಬಿ,,,,,
ದೇಶ ಕಪ್ಪಾಗಬಹುದು,
ನಾವು ಬೆಪ್ಪರಾಗಬಹುದು,,,,,

-ಜೀ ಕೇ ನ 
 

Comments

Submitted by kavinagaraj Sat, 03/28/2015 - 21:38

ವಿವೇಚನೆ ಮತ್ತು ವಿವೇಕದೊಡಗೂಡಿದ ಕಾರ್ಯಗಳು ಮಾತ್ರ ದೇಶವನ್ನು ಮುನ್ನಡೆಸಬಲ್ಲವು. ಈಗ ಆಡಳಿತ ಮಾಫಿಯಾಗಳ ಹಿಡಿತದಲ್ಲಿದೆ. ಅದಕ್ಕೆ ಕಾರಣ ಮತದಾರರೇ, ಅರ್ಥಾತ್ ನಾವೇ!! ನಿಮ್ಮ ಕವನದಲ್ಲಿನ ದೇಶದ ದುಸ್ಥಿತಿಯ ವರ್ಣನಗೆ ಕಾರಣವಾಗಿರುವುದೂ ಇದೇ ಆಗಿದೆ, ನವೀನರೇ.