ನಾಲ್ಕು ಹನಿಗಳು...

ನಾಲ್ಕು ಹನಿಗಳು...

ಕವನ

ವಿಶ್ವ ಮಾನವ

ಸಹೃದಯ

ಭಾವದ

ಹೊಳೆಯೊಂದು

ಹರಿಯುತಲಿರಲಿ

ಮಾನವನ

ಎದೆಯಿಂದಲೆದೆಗೆ

ನಿರಂತರಾ...

 

ಜಾತಿ ಮತಗಳ

ಎಲ್ಲೆಯನು

ಮೀರಿ

ವಿಶ್ವಮಾನವನಾಗಿ

ಮಾನವೀಯತೆಯ

ಸೆಲೆಯಲಿ

ತೇಲುವ ಬಾರಾ!

***

ಬದುಕು

ಆದಿ ಮಾನವನಿಗೆ

ಭಾವಗಳಿರಲಿಲ್ಲ

ಬರೀ ಬದುಕಿತ್ತು;

ಅದರಲ್ಲಿ

ಶ್ರಮವಿತ್ತು;

ಸುಖದ ಬದುಕಿನ ಗೂಡು....

 

ನಾಗರೀಕತೆಯ

ಬದುಕಲ್ಲಿ

ಶ್ರಮವೆಲ್ಲಿ....?

ಬರೀ ಭಾವದ ಬದುಕು

ಶ್ರಮವಿಲ್ಲ;ಸುಖವಿಲ್ಲ

ಬರೀ ಗೊಂದಲದ ಮಾಡು!

***

ನನ್ನ ದೇಶ

ಒಂದು

ದೇಶದ

ಸಂಸ್ಕೃತಿಯೇ

ಆತ್ಮ;

ನಾಗರೀಕತೆಯೇ

ದೇಹ;

ಇವೆರೆಡರ

ಸಮ್ಮಿಲನವೇ

ಪರಂಪರೆ;

ಇದುವೇ

ನನ್ನ ಭವ್ಯ

ಭಾರತ...

ನೆನೆವೆ ನಾ

ಅನವರತ!

***

ಪಂಚ ಮಹಾಭೂತಗಳು!

    ಓ ಪಂಚ

ಮಹಾಭೂತಗಳೇ

ನೀವೇ ಈ ಜಗದ

    ನಿಜವಾದ

ಕರ್ತೃ ಎಂಬ ಸತ್ಯ

     ತಡವಾಗಿ

ಹೊಳೆಯಿತಲ್ಲ...

    ನೀವೇ ನಿತ್ಯ

  ಸತ್ಯವೆಂಬುದು

ಅರಿವಾಗಲೇ ಇಲ್ಲ

  ನಿಮ್ಮನು ಬರೀ

    ದುರ್ಬಳಕೆ

ಮಾಡಿಕೊಂಡೆವಲ್ಲಾ

    ಕ್ಷಮೆಯಿರಲಿ

     ಪಂಚಮರೇ

      ಈ ಜಗದ 

ಮಹಾ ಸೃಷ್ಟಿಕರ್ತರೇ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್