ನಾಲ್ಕು ಹನಿ ಸಾಲುಗಳು
ಕವನ
ಒಂದು
ದಿನ
ಈ
ಅಕ್ಷರ
ಶಬ್ದ - ಸಾಲುಗಳೆಲ್ಲಾ
ಸೋತು
ಸೊರಗಿ
ನಿಲ್ಲಬಹುದು
ಭಾವನೆಯದ್ದು
ಅದೇ
ನಿರಂತರ
ಹರಿವು........
++++++++++++++
ನಾನೇ
ಕಟ್ಟಿಕೊಂಡ
ಈ
ನನ್ನ
ಕನಸಿನ
ಸೌಧ
ನನ್ನಮ್ಮನ
ನೆನಪಲ್ಲಿ
ಕರಗುತ್ತಿದೆ......
++++++++++
ನಿನ್ನೊಂದಿಗೆ
ನಾ
ಕಳೆದು ಹೋದೆ
ನೀನಿಲ್ಲದೇ
ನನ್ನೆ
ನಾ
ಕಂಡುಕೊಂಡೆ......
++++++++++++++
ಎಲ್ಲಿಯೂ
ಯಾರೊಂದಿಗೂ
ಹೇಳಲಾಗದ
ಒಂದೆರಡು
ಮಾತುಗಳು
ನನ್ನೊಳಗೆ
ಇನ್ನೂ
ಹಾಗೇ
ಇದೆ.....
+++++++++++