ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?
ಬರಹ
ಇದೊಂದು ಕಥಾ ಸ್ಪರ್ಧೆ.
ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು)
ಉದಾಹರಣೆಗೆ ೧
ಟೈಟಲ್ : ಕಾಯುವಿಕೆ
೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ ಉಣಿಸುವವನಿಗಾಗಿ ಕಾಯುತ್ತಿದ್ದ್ದಂತೆ ಅವನು ಬಂದು ಅವಳ ಬಾಳ ಬಳ್ಳಿಯನ್ನೆ ಚಿವುಟಿ ಹೋದ.
ಉದಾಹರಣೆ ಎರೆಡು
ಟೈಟಲ್: ಕೊನೆ ಆಸೆ
೨) ಒಂದು ಸಲವಾದರೂ ತನ್ನನ್ನು ಎಲ್ಲರೂ ಹೊಗಳಬೇಕೆಂಬ ಆಸೆ ಆ ರಾಜಕಾರಣಿಗಿತ್ತು . ಆ ಸಮಯ ಬಂದಾಗ ಆ ಆನಂದವನ್ನು ಅವನು ಅನುಭವಿಸಲಾಗಲಿಲ್ಲ ಯಾಕೆಂದರೆ ಅವನು ಆಗಲೆ ಚಟ್ಟದ ಮೇಲೆ ಇದ್ದ.
ಉದಾಹರಣೆ ಮೂರು
ಟೈಟಲ್ : ಪಾತ್ರ
೩) ಸಿನಿಮಾದಲ್ಲಿ ಒಂದೇ ಒಂದು ಸಲವಾದರೂ ನಟಿಸಬೆಕೆಂಬ ಆಸೆ ಆ ಹುಡುಗನದು . ತನ್ನ ಆಸೆಯನ್ನು ನಿರ್ಮಾಪಕನೊಬ್ಬನಿಗೆ ಹೇಳಿಕೊಂಡಾಗ ಕೊನೆಗೂ ಪಾತ್ರ ಸಿಕ್ಕಿತು. ಅದು ಸಾವಿನ ಮೆರವಣಿಗೆಯ ಶವದ ಪಾತ್ರ.
ಹೀಗೆ ಬರೆಯುತ್ತೀರಲ್ಲ ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?