ನಾಳೆ

ನಾಳೆ

ಕವನ

ಬದುಕೆಂಬುದೊಂದು ತೆರೆದಿಟ್ಟ ನವಿರಾದ ಹಾಳೆ
ವರ್ತಮಾನದ ಚೈತ್ರಗಳ ಸೊಗಸಾದ ಸಾಲೆ
ಮುಂದಿನ ಹಾದಿಯೆಡೆಗಿನ ಕನಸುಗಳ ಸರಮಾಲೆ
ಈ ಆಂತರ್ಯದ ಕನಸುಗಳಿಗೆ ಉತ್ತರವೆ ನಾಳೆ

ಈ ಕಾಲದ ಮಾಂತ್ರಿಕತೆಗೆ ಸೋತು ನೆನಪಾಯಿತು" ನೆನ್ನೆ"
ಈ ನೆನೆಪುಗಳ ಸಾಲಿನಲಿ ಮುಂದೆ ನಿಂತಿದೆ "ಮೊನ್ನೆ"
"ಇಂದು" ಮೆಲ್ಲನೆ ಹಿಂಬಾಲಿಸುತಲಿದೆ ನೆನ್ನೆಗಳ ಕಣ್ಸನ್ನೆ
ಈ ಸಾಲನು ಕಂಡು ರಂಗೇರುತಲಿದೆ ಮುದ್ರಿಸದ "ನಾಳೆ" ಯ ಕೆನ್ನೆ

ಸೂರ್ಯ ಬೆಳಗಿ ಮರೆಯಾಗಿ ಮಲಗು ಎಂದನು ಪ್ರಕೃತಿಗೆ
ಪ್ರಕೃತಿ ನಕ್ಕು ಸೊಗಸಾಗಿ ಬಾ ಎಂದಿತು ಚಂದ್ರನಿಗೆ
ಚಂದ್ರನ ಹೊಂಬೆಳಕು ಮುದ ನೀಡಿತು ಕನಸಿಗೆ
ಕನಸೊಂದು ಕಣ್ತೆರೆದು ಕರೆ ಮಾಡಿತು "ನಾಳೆಗೆ"

ಕನಸಿಗೂ ನಾಳೆಗು ಅದೆಂತಹ ಮಧುರವಾದ ಬೆಸುಗೆ!
ಇಂದಿನ ಕಹಿ ಮರೆತು ಬಾಳೋಣ ನಾಳೆಗಳ ಸಿಹಿಗೆ
ಕನಸಿಲ್ಲದ ಬದುಕನ್ನು ನೆನೆಯುವುದು ಹೇಗೆ?
ನಾಳೆಗಳ ಕನಸಿನಲಿ ಈ ಬದುಕು ಸಾಗಲಿ ಹೀಗೆ!!!!

Comments

Submitted by Nayana Kotian 1 Fri, 09/04/2015 - 15:07

ತುಂಬಾ ಸೊಗಸಾದ ಕವನ  ದಿಕ್ಷಿತ್ ರವರೇ

Submitted by dakshith hm Sat, 09/05/2015 - 11:58

In reply to by Nayana Kotian 1

ಈ ಪುಟ್ಟ ಕವಿಯ ಕವಿತೆಯನ್ನು
ಕವಿಪ್ರಿಯನೊಬ್ಬ ಕವಿಮನಸ್ಸಿನಿಂದ ಓದಿ
ಆನಂದಿಸಿದರೆ,
ಕವಿತೆಗೊಂದು ಗೌರವ ದೊರಕಿ
ಕವಿಮನಸ್ಸಿಗೊಂದು ತೃಪ್ತಿ ದೊರಕುವುದು