ನಾವಿಕ
ಕವನ
ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ
ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ
ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ
ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ
ಶಾಂತಿಯ ಅರಸೆ ದೂರಹೋಯಿತೆಲ್ಲಿ
ನೆಮ್ಮದಿಯ ಬಯಸೆ ಕಾಣದಾಗಿದೆ ಇಲ್ಲಿ
ತುಂಬು ಓ ಚೈತನ್ಯ ನನ್ನ ಆತ್ಮದಲ್ಲಿ
ಜ್ಞಾನ ದೀಪ ಉರಿಯಲಿ ಮನಸಿನರಿವಿನಲ್ಲಿ
ಬಲಹೀನತೆ ನನ್ನಿದಿರು ನಡುಬಗ್ಗಿ ನಡೆಯಲಿ
ಮಂಕುಮುಸುಕು ವಿಳಾಸಿಸದೆ ಬೆಂಗೊಟ್ಟೋಡಲಿ
ಮಾಲಿಕನೆ ಬರೆಯುವೆ ಸರ್ವಸ್ವ ನಿನ್ನ ಹೆಸರಲಿ
ಇರಲು ಅಭಯ ಮಹಿಮನ ನಾಮ ಮಹಿಮೆಯಲಿ
ಬತ್ತಿದ ಅಕ್ಷಿಬಟ್ಟಲುಗಳಿವೆ ಕಣ್ಣೀರನು ತುಂಬುವೆಯಾ
ಮೃತಿ ಹೊಂದಿದೆ ಅಂತರಂಗ ಜೀವಬರಿಸುವೆಯಾ
ಕಣ್ಣಾಲಿಗಳು ತುಂಬಿಹರಿಯಲಿ ಉಕ್ಕಿಬರಲು ಹೃದಯ
ದಡ ಸೇರಿಸೋ ನಾವಿಕನೆ ಹತ್ತಿಹೆ ನಿನ್ನ ನಾವೆಯ