ನಾವುಗಳೇ ಹೀಗೆ!

ನಾವುಗಳೇ ಹೀಗೆ!

ಬರಹ

ಕೆಲಸ ಕಾರ್ಯಗಳನು ನಾಳೆಗೆ
ಮುಂದೂಡಿ ಕುಳಿತು
ಇಂದಿನಾ ದಿನವನ್ನು ಮುಗಿಸುವ
ನಾವುಗಳೇ ಹೀಗೆ
ದಿನವನ್ನು ಕಳೆಯುತ್ತೇವೆ
ಬೆಲೆ ನೀಡುವುದಿಲ್ಲ.

ತಿರುಳಿಲ್ಲದ ಘಟನೆಗಳನು
ಬಹು ಸೃಷ್ಟಿಮಾಡಿ
ಹುರುಳಿಲ್ಲದೆಯೆ ನೆನೆದು
ದುಃಖಿಸುವ ನಾವುಗಳೇ ಹೀಗೆ
ಹಿಂದಿನದ ತಿರುಚುತ್ತೇವೆ
ಹೊಸದ ಸೃಷ್ಟಿಸುವುದಿಲ್ಲ

ಮುಂದಿನಾಬದುಕಿಗೆ
ಕನಸಗೋಪುರವನ್ನು
ಮನಸಲ್ಲೇ ಕಟ್ಟುತ್ತಾ
ನಿದ್ರಿಸುವ ನಾವುಗಳೇ ಹೀಗೆ
ಭ್ರಮೆಯ ಲೋಕದಲಿ ಸಾಗುತ್ತೇವೆ
ಗುರಿ ತಲುಪುವುದೇ ಇಲ್ಲ.