ನಾವು ಇರದಾ ನಾಳೆಗಳೂ...

ನಾವು ಇರದಾ ನಾಳೆಗಳೂ...

ಕವನ

ನಾವು ಇರದಾ ನಾಳೆಗಳೂ

ನಾಗರೀಕವೇ ಇರಲೀ l

ನಾಳೆ ನಮ್ಮ ಪೀಳಿಗೆಯೂ

ನಗುನಗುತನೆ ಬದುಕಿರಲೀ l

ಜಾತೀ ಧರ್ಮದ ದ್ವೇ಼ಷ ಅಳಿಸುತ 

ಪ್ರೀತಿಯಲೀ ದೇಶ ಕಟ್ಟುತ

ಶಾಂತಿನೆಮ್ಮದಿಯ ಬೀಡಾಗಲಿ ನಾಡೂ...ll

 

ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರ

ಧರ್ಮಗಳಾ ಗುರಿ ಒಂದೇ

ಬಹು ಸಂಸ್ಕೃತಿಯೊಳು ಏಕತೆಯಿಂದಲಿ  

ಸಾರುವ ನಾವೂ ಒಂದೇ 

ಧರ್ಮ ದ್ವೇಷದೇ ನಡೆದೆವಾದರೇ

ಉಳಿಯದೆಮ್ಮ ದೇಶಾ...ll

 

ಇವರಿಗೆ ಅವರು ಅವರಿಗೆ ಇವರು

ಬದುಕಲಿರಲೂ ನೀತೀ

ಆ ಧರ್ಮ ದ್ವೇಷದ ವಿಷದ ಗಾಳಿಯ

ಜನರೊಳಗೇ ತೂರೀ

ಅನುಮಾನದೆ ಜನ ಬಡಿದಾಡಲು ದಿನ 

ಮಾಯವಾಯ್ತು ಪ್ರೀತೀ...ll

 

ಯಾರದೊ ಅಧಿಕಾರದ ರಣ ತಂತ್ರಕೆ

ಬಲಿಯಾದರೆ ನಾವೂ

ಸೌಹಾರ್ದ ಸಂಸ್ಕೃತಿಯ ಹೆತ್ತ ತಾಯಿಗೇ

ಕೊಟ್ಟಂತೆಯೆ ನೋವೂ

ಸಂವಿಧಾನವಾ ಅರಿತು ನಡೆಯದಿರೆ

ದೇಶಕದುವೆ ಸೋಲೂ....ll

 

ಎಚ್ಚರಗೊಳ್ಳುವ ಜನರೇ

ಸರ್ವ ನಾಶವದು ಘಟಿಸುವ ಮೊದಲೇ

ಅಧರ್ಮದಮಲಲಿ ಮುಳುಗಿದರೇ

ಉಳಿವಿಲ್ಲವು ನಮಗೇ

ಸತ್ಯಕೆ ಎಂದಿಗು ಸಾವಿಲ್ಲ

ಹರಿಯುವ ನೀರಿಗೆ ಕೊಳೆಯಿಲ್ಲ

ಬನ್ನಿ ಕೂಗೊಂದು ಕೇಳುತಿದೇ

ನಮ್ಮ ದೇಶದ ಒಡಲಿಂದಾ....ll

-ಶಾ..ಪ..

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್