ನಾವು ಏನಾಗಬೇಕಿತ್ತೊ…?

ನಾವು ಏನಾಗಬೇಕಿತ್ತೊ…?

ಕವನ

ನಾವು ಏನಾಗಬೇಕಿತ್ತೊ ? ಅದಾಗುವುದೇ ಇಲ್ಲ! 

ಸರಿಯಾದ ದಾರಿಯಲಿ ಹೋಗುತ್ತಿರಬೇಕಾದರೇ 

ಬಾಳರಥ ಆಕಸ್ಮಿಕ ಮಳೆ ಬಂದು ಮನೆಯೊಳಗೆ

ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು

ಬಿಡುತ್ತದೆ ಜೀವನ ಚಕ್ರ ಮುಂದೆ ಹೋಗದಂತೆ !!

 

ಸೋತು ಸುಣ್ಣವಾಗಿದ್ದ ಮನದಾಳದಲ್ಲಿ ಛಲಮೂಡಿ

ಮರೆಯಾಗುತ್ತದೆ ಇದಕ್ಕೆಲ್ಲ ಬಡತನವೇ ಪಾಠ

ಎದುರಾಳಿಯ ಸೊಕ್ಕು ಮುರಿಯ ಬೇಕೆಂದರೂ, 

ಸಿಗಲಾರದ ಹಿಂಬಲದಿಂದಾಗಿ ಕಣ್ಮಚ್ಚಿದ ದಿನಗಳಲ್ಲಿ

ಮತ್ತೆ ಹೊಸ ವಿಚಾರಗಳು ಮೂಡುವುದೇ ಇಲ್ಲ ! 

 

ಮೊನ್ನೆ ಯಾರೋ ಹೀಗಂದರು ನೀವು ನಿಮ್ಮ ಮೇರು

ವಿಚಾರಗಳಿಗೆ ಎಲ್ಲೋ ಇರಬೇಕಿತ್ತೆಂದು ? ಸತ್ಯ ಕಣ್ಣಿಗೆ 

ಕಾಣುವುದಿಲ್ಲ ಯಾರಿಗು ಯಾರಿಗೂ ! ಒಬ್ಬ ಯಾವುದರಲ್ಲೇ

ಆಗಲಿ ಸಾಧಿಸುತ್ತಾನೆಂದರೆ ; ಹೊಸತನವ ತರುತ್ತಿದ್ದಾನೆಂದರೆ

ಅವನ , ಅವನ ವಿಚಾರಗಳ ತುಳಿದು ನಗುವ ಮಂದಿ ನಾವು ! 

 

ಈಗೀಗ ಕೆಸರುಗದ್ದೆಗಳಿಗೂ ನಮಗೂ ವ್ಯತ್ಯಾಸವೇ ಇಲ್ಲ 

ಅದಾದರೂ ಬೇಕು ಕೆಸರಿನಲ್ಲಿ ಕಮಲವರಳುತ್ತದೆ, ಆದರೆ 

ನಮ್ಮಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ ಜೊತೆಗೆ ಹೊಟ್ಟೆಕಿಚ್ಚು !

ಮೌನವಾಗಿರುವವರೆಗೂ ತಲೆಗೆ ಕುಟ್ಟಿ ಹಾಕುವವರೂ; 

ಹಾಕಿಸಿಕೊಳ್ಳುವವರು ಈ ಹದಗೆಟ್ಟ ಸಮಾಜದಲ್ಲಿ ಇದ್ದೇ ಇರುತ್ತಾರೆ !!

 

-ಹಾ ಮ ಸತೀಶ ಬೆಂಗಳೂರು

ಇಂಟರ್ನೆಟ್ ಚಿತ್ರ

ಚಿತ್ರ್