ನಾವು ಮಕ್ಕಳು ಭಾರತ ಮಾತೆಯ......
ಕವನ
[ಧಾಟಿ-ಪಂಚಮಿ ಹಬ್ಬ ಉಳಿದಾವ ದಿನ ನಾಕ।ಅಣ್ಣ ಬರಲಿಲ್ಲ ಯಾಕ ಕರಿಯಾಕ...]
ದೇಶ ಸೇವೆ..ದೇಶ ಸೇವೆ ಗೈವುದೆ ನಮ್ಮ ಧ್ಯೇಯ
ನಾವು ಮಕ್ಕಳು ಭಾರತ ಮಾತೇಯ[೨ಸಲ]
ನಮ್ಮ ಭಾರತ ಚೆಲುವಿನ ನಾಡು
ಇಲ್ಲಿ ಜನಿಸಿರುವುದೆ ಪುಣ್ಯ ನೋಡು
ನಮ್ಮ ದೇಶ ಸಂಸ್ಕೃತಿಯ ನೆಲೆವೀಡು
ಸ್ವರ್ಗವಿಲ್ಲಿದೆ,ಸ್ವರ್ಗವಿಲ್ಲಿದೆ,ಸ್ವರ್ಗವಿಲ್ಲಿದೆ ಬೇರೆಲ್ಲೂ ಇಲ್ಲ
ನಾವು ಮಕ್ಕಳು ಭಾರತ ಮಾತೇಯ [ದೇಶ ಸೇವೆ]
ದೈವಕೃಪೆಯಿರೆ ನಮ್ಮಯ ಮೇಲೆ
ಎಂತಹ ಕಾರ್ಯವು ನಮಗೊಂದು ಲೀಲೆ
ನಮಗೆಲ್ಲಾ ಕಾದಿದೆ ಭವ್ಯ ನಾಳೆ
ಎಂಬ ವಿಶ್ವಾಸ ,ಎಂಬ ವಿಶ್ವಾಸ,ಎಂಬ ವಿಶ್ವಾಸ ಕುಂದುವುದಿಲ್ಲ
ನಾವು ಮಕ್ಕಳು ಭಾರತ ಮಾತೇಯ [ದೇಶ ಸೇವೆ]
[ಎಲ್ಲಾ ಸಂಪದಿಗರಿಗೂ ಗಣರಾಜ್ಯೋತ್ಸವದ ಶುಭಾಶಯಗಳು]
Comments
ಉ: ನಾವು ಮಕ್ಕಳು ಭಾರತ ಮಾತೆಯ......
ಉ: ನಾವು ಮಕ್ಕಳು ಭಾರತ ಮಾತೆಯ......
ಉ: ನಾವು ಮಕ್ಕಳು ಭಾರತ ಮಾತೆಯ......
In reply to ಉ: ನಾವು ಮಕ್ಕಳು ಭಾರತ ಮಾತೆಯ...... by siddhkirti
ಉ: ನಾವು ಮಕ್ಕಳು ಭಾರತ ಮಾತೆಯ......