ನಾವು ಹೋಗಿದ್ದ ಸಮಯದಲ್ಲಿ ಇಲಿನಾಯ್ ನಲ್ಲಿ ಇನ್ನೂ ವಿಂಟರ್ ಕಾಲಿಟ್ಟಿರಲಿಲ್ಲ !

ನಾವು ಹೋಗಿದ್ದ ಸಮಯದಲ್ಲಿ ಇಲಿನಾಯ್ ನಲ್ಲಿ ಇನ್ನೂ ವಿಂಟರ್ ಕಾಲಿಟ್ಟಿರಲಿಲ್ಲ !

ಬರಹ

ಅಜಿತ್ ಕಳ್ಳಂಬೆಳ್ಳ ಹಾಗೂ ಅವರ ಪತ್ನಿ, ಹರ್ಷ ಕಳ್ಳಂಬೆಳ್ಳ, ಅತಿಥಿ ಸತ್ಕಾರೆಕ್ಕೆ ಎತ್ತಿದ ಕೈ. ಕರ್ನಾಟಕ ತಿಂಡಿ ತಿನಸುಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಅಕ್ಕಿ ರೊಟ್ಟಿ, ರಾಗಿಮುದ್ದೆ, ಹಪ್ಪಳ. ಸಂಡಿಗೆ, ಮನೆಯಲ್ಲಿ ಹೆಪ್ಪುಹಾಕಿದ ಮೊಸರು, ನಿಪ್ಪಟ್ಟು, ಕೋಸಂಬರಿ, ಶ್ಯಾಮಿಗೆ ಪಾಯಸ, ಜಾಮೂನ್, ಚಿತ್ರಾನ್ನ, ಗಳನ್ನು ಸವಿದ ನಮಗೆ, ಇಗಲೂ ಆ ಖಾದ್ಯಗಳ ರುಚಿ, ಪರಿಮಳ ನೆನೆಪಿನಲ್ಲಿ ಅಚ್ಚೊತ್ತಿದೆ. ಅವೆಲ್ಲಾ ಅಷ್ಟು ನಮಗೆ ಪ್ರಿಯವಾಗಿದ್ದು, ನಮ್ಮ ತಾಯ್ನಾಡಿನ ಖಾದ್ಯಗಳ ಸವಿನೆನಪನ್ನು ದೂರದ ಅಮೆರಿಕದಲ್ಲಿ ತಂದುಕೊಟ್ಟಿದ್ದಕ್ಕಾಗಿ ! ನಮಗೆ ಬೆಂಗಳೂರಿನಲ್ಲಿಯೇ ಇದೀವೇನೋ ಅನ್ನಿಸಿತ್ತು. ಜೊತೆಗೆ ಅವರ ಮುದ್ದಿನ ಮಗು, ಗೌರಿಯ ಮುದ್ದು, ಮುದ್ದು ಮಾತಿನ ಸವಿ, ಅಪರಿಮಿತವಾಗಿತ್ತು ! ನಮ್ಮನ್ನು ಅದು ಅಜ್ಜಿ, ಅಜ್ಜ ಎಂದು ಕರೆಯಲು ಶುರುಮಾಡಿತ್ತು. ನಮಗೂ ಅದರ ಪ್ರೀತಿಯ ನಡುವಳಿಕೆ ಅತಿ-ಮುದ ತಂದಿತ್ತು.

ವಿಂಟರ್ ಬಂದರೆ, ಎಲ್ಲೂ ಹೋಗುವುದು ಅತಿ ಕಷ್ಟವಂತೆ. ನಾವು ಇದ್ದಷ್ಟು ದಿನ ಸ್ವೆಟರ್ ಕೂಡಾ ಬಳಸಲಿಲ್ಲ.

-ಚಿತ್ರ, ನಮ್ಮ ಆಲ್ಬಮ್ ನಿಂದ.