ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ !

ನಾವೆಲ್ಲಾ ಅತಿಕಾತುರದಿಂದ ಕಾಯುತ್ತಿದ್ದ " ಬೀಜಿಂಗ್ ಒಲಂಪಿಕ್ಸ್ " ಇನ್ನೇನು ಶುರುವಾಗುವ ಸಮಯ ಹತ್ತಿರ ಬಂದಿದೆ !

ಬರಹ

ಒಲಿಂಪಿಕ್ ಉದ್ಘಾಟನೆಯ ಕ್ಷಣಗಣನೆಯನ್ನು ನಿರೀಕ್ಷಿಸಿ !

ಬೀಜಿಂಗ್ ಒಲಂಪಿಕ್ ಮಹಾನ್ ಕ್ರೀಡಾಕೂಟದ ಉದ್ಘಾಟನೆ ಆಗಸ್ಟ್ ೮, ರಂದು ಶುರುವಾಗುವ ಶುಭಘಳಿಗೆ ಹತ್ತಿರ-ಹತ್ತಿರ ಬರುತ್ತಿದೆ. ಸುಮಾರು ೨.೫ ವಾರ ನಡೆಯುವ ಈ ಸ್ಪರ್ಧಾತ್ಮಕ ಆಟಗಳನ್ನು ಏರ್ಪಡಿಸಲು, ಸುಮಾರು ೭ ವರ್ಷ ಸಮಯ ಹಿಡಿಯಿತು! ಒಲಂಪಿಕ್ ಕ್ರೀಡಾಸಕ್ತರೆಲ್ಲಾ ಆ ಸವಿಘಳಿಗೆಯ ನಿರೀಕ್ಷಣೆ ಮಾಡುತ್ತಿದ್ದಾರೆ. ಚೀನಾದೇಶದ ಜನರು, ಈಗಾಗಲೇ ಪೂರ್ಣ-ಸಿದ್ದತೆಯೊಂದಿಗೆ ಅಣಿಯಾಗಿದ್ದು, ಜಾಗತಿಕವಾಗಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಂಕಲ್ಪ ಹೊಂದಿದ್ದು, ಆ ಕಾರಣಕ್ಕಾಗಿ ಒಲಿಂಪಿಕ್ ಆಟಕ್ಕೆ ಬಿಲಿಯಗಟ್ಟಲೆ ಹಣವನ್ನು ಖರ್ಚುಮಾಡಿದ್ದಾರೆ. ಕ್ರೀಡೆಯ ಉದ್ಘಾಟನಾ ಸಮಾರಂಭ, ಹಾಗೂ ಮುಕ್ತಾಯಸಮಾರಂಭಗಳಿಗೆ, ಸುಮಾರು ೧೦೦ ಮಿಲಿಯನ್ ಡಾಲರ್ ಹಣ ವ್ಯಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲೇ ಹೆಚ್ಚು-ಕಡಿಮೆ ೧೫,೦೦೦ ಜನ ಭಾಗವಹಿಸುತ್ತಾರೆ. ಸುಮಾರು ೨೯,೦೦೦ ಪಟಾಕಿಗಳನ್ನು ಹೊಡೆಯುವ ಏರ್ಪಾಡಾಗಿದೆ. ಪ್ರದೂಷಣವನ್ನು ಹತೋಟಿಯಲ್ಲಿಡಲು ಮಾಡಿರುವ ಖರ್ಚೇ ಸುಮಾರು ೧೮ ಬಿಲಿಯನ್ ಡಾಲರ್ ಗಳು. ಗಾಳಿಯಲ್ಲಿನಮಾಲೀನ್ಯತೆ, ೧೫೦ ಮಿ. ಗ್ರಾಂ/ಪ್ರತಿಘನ.ಮೀ. ಇರಬೇಕಾದದ್ದು, ಈಗ, ೧೯೧ ಮಿ. ಗ್ರಾಂ/ಪ್ರತಿ ಘ. ಮೀ ಆಗಿದೆ. ಅದರಿಂದಾಗಿ ಕೆಲವು ಬಾರಿ, ಆಟಗಳನ್ನು ನಿಲ್ಲಿಸಿ ಮಾರನೆಯದಿನ ಮತ್ತೆ ಶುರುಮಾಡಲಾಗುವುದು. ಭಯೋತ್ಪಾದರ ದಾಳಿಯ ನಡುವೆಯೂ, ಸಾಯಂಕಾಲ, ಒಲಂಪಿಕ್ ಆಟ ಉದ್ಘಾಟನೆಯಾಗಲಿದೆ. ಭಾರತದಿಂದ ಸುಮಾರು ೫೭ ಮಂದಿ ಕ್ರೀಡಾಗಳುಗಳು, ಬೀಜಿಂಗ್‌ ಗೆ ತೆರಳಿದ್ದಾರೆ. ಇದರಲ್ಲಿ ರಾಜ್ಯವರ್ಧನ್ ರಾಥೋಡ್, ಅಂಜು ಬಾಬಿ ಜಾರ್ಜ್, ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸೇರಿದಂತೆ ಸುಪ್ರಸಿದ್ಧ ಕ್ರೀಡಾಳುಗಳು ತಂಡದಲ್ಲಿದ್ದಾರೆ. ಶೂಟಿಂಗ್, ಆರ್ಚರಿ, ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕಗಳು ಲಭಿಸುವ ನಿರೀಕ್ಷೆ ಇದೆ. ಈ ಮಹಾನ್ ಕ್ರೀಡಕೂಟದಲ್ಲಿ ೨೮ ಕ್ರೀಡೆಗಳು ನಡೆಯಲಿದ್ದು , ಒಟ್ಟು ೧೧,೫೦೦ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ ೪೫% ಜನ ಹೆಣ್ಣುಕ್ರೀಡಾಳುಗಳು. ಬೀಜಂಗ್‌ ಪೂರ್ಣಪ್ರಮಾಣದಲ್ಲಿ ನವ-ವಧುವಿನಂತೆ ಶೃಂಗಾರಗೊಂಡಿದ್ದು, ಸಿಡಿ-ಮದ್ದುಗಳ ಆಕರ್ಷಕ ಪ್ರದರ್ಶನ, ಸಾವಿರಾರು ಚೀನಿ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅನಾವರಣಗೊಳ್ಳಲಿದೆ. ಪೋಲೀಸ್ ಬಿಗಿ ಬಂದೋಬಸ್ತ್, ಮಧ್ಯೆ, ಒಲಿಂಪಿಕ್ ಗೇಮ್ಸ್ ಆರಂಭಕ್ಕೂ ಮುಂಚೆ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಮುನ್ನೆಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಬೀಜಿಂಗ್‌ನಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಈಗಿರುವ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.