ನಾ ಎಂದವರ ಸೊಕ್ಕು ಮುರಿಯಲು ನೀ ನಗು !

ನಾ ಎಂದವರ ಸೊಕ್ಕು ಮುರಿಯಲು ನೀ ನಗು !

ಕವನ

ನಗು ನಗು ನಗು ನಗು

ಎಂದೆಂದೂ ನೀ ನಗು

ಸೋಲಲ್ಲಿ ನಗು

ಸೋತಿರುದಕ್ಕೆ ನೀ ನಗು

 

ದುಃಖ ಬಂದರೆ ನೀ ನಗು

ನೋವು ಇದ್ದರೆ ನೀ ನಗು

ಅವಮಾನ ಆದರೆ ನೀ ನಗು

ಅವರ ಅಹಂಕಾರ ಮುರಿಯಲು ನೀ ನಗು

 

ಇವತ್ತಿನ ಕಷ್ಟಕ್ಕೆ ನೀ ನಗು

ನಾಳೆಯ ಖುಷಿಗೆ ನೀ ನಗು

ತುಳಿದವರ ಮುಂದೆ ನಿಲ್ಲಲು ನೀ ನಗು

ನಾಳೆಯ ಗೆಲುವಿಗೆ ನೀ ನಗು

 

ನಾ ಎಂದವರ ಸೊಕ್ಕು ಮುರಿಯಲು ನೀ ನಗು

ತುಳಿಯುವರ ದಡ್ಡತನಕ್ಕೆ ನೀ ನಗು

ಉಪಯೋಗ ಪಡೆದು ಆರೋಪ ಮಾಡಿದವರ ಮುಂದೆ ನೀ ನಗು

ಅಪಕಾರ ನುಡಿದವರ ಮುಂದೆ ನಿಂತು ನೀ ನಗು 

 

ನಿನ್ನೆ  ಕರಾಳ ದಿನಕ್ಕೆ ನೀ ನಗು

ಇವತ್ತಿನ ಶುಭ ದಿನಕ್ಕೆ ನೀ ನಗು

ನಾಳೆ ಸಂತೋಷಕ್ಕೆ ನೀ ನಗು

ಸಾಧನೆ ಮೆರೆದು ನೀ ನಗು

 

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ.ನರೇಗಲ್ಲ ಜಿಲ್ಲಾ ಗದಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್