ನಾ ಕಂಡ ಅದ್ಭುತ!!☺

ನಾ ಕಂಡ ಅದ್ಭುತ!!☺

ಅಂದು ಏಪ್ರಿಲ್ 4,2016 ಸೋಮವಾರ,ಹೊಸ ಜೀವನದ ಸಾಗರದಷ್ಟು ಕನಸು ಹೊತ್ತು ಹೊಸ ಕೆಲಸಕ್ಕೆ ಹಾಜರಿ ಹಾಕಿದೆ, ನನ್ನ ಹಾಗೆ ನೂರೆಂಟು ಆಸೆ ಇಟ್ಟು ಬಂದತ ಎಷ್ಟೊಂದು ಹೊಸ ಮುಖಗಳು. ಅಷ್ಟು ಜನರ ಮದ್ಯದಲ್ಲಿ ಕಂಡಂತ ಒಂದು ಮುಖದಲ್ಲಿ ಅದೇನೋ ತೇಜಸ್ಸು, ಉತ್ಸಾಹ, ಗುಣಾತ್ಮಕ ಅಂಶಗಳು ಎದ್ದು ಕುಣಿಯುತ್ತಿತ್ತು. ನೋಡಿದ ಮೊದಲ ಸಲವೇ ಎಷ್ಟೋ ವರುಷಗಳ ಪರಿಚಯ ಅನ್ನೋ ಆಕರ್ಷಣೆ ಆ ಮುಖದಲ್ಲಿ, ಮತನಾಡಬೇಕಬ ಹಂಬಲ, ಯಾರು ನೀನು ಎಲ್ಲಿ ಇದ್ದಿ ಇಷ್ಟು ದಿನ ಅಂತ ಕೇಳೋ ಆತುರ,ಎಂದು ಯಾವ ಹುಡುಗಿಯ ಹತ್ತಿರ ಕಣ್ಣು ಎತ್ತಿ ನೋಡಿ ಮಾತಾಡಿದ ಅನುಭವ ಇಲ್ಲದೆ ಹತ್ತಿರ ಹೋಗಿ ಅದೇನೋ ನಿನ್ನ ಕೇಳಿದೆ,ಅಂದು ಶುರುವಾದ ಮಾತು ತುಂಬಾ ಹತ್ತಿರವಾಗಿ ಹೋಗುವ ಹಾಗೆ ನಮ್ಮ ಸಂಬಂಧ ಗಟ್ಟಿಯಾಗಿ ಹೋಗಿತು,ಹೊಸ ಜೀವದ ಹೊಸ ಅನುಭವ ಕೊಟ್ಟ ನನ್ನ ಜೀವನದ ಮೊದಲ ವ್ಯಕ್ತಿ ನೀನಾಗಿ ಹೋದೆ,ಹೆಸಗಿಗಷ್ಟೇ ಸೀಮಿತ ವಾದ ನನ್ನ ಹೆಸರು, ಸಂತೋಷ್ ಎಂಬ ನನ್ನ ಹೆಸರಿನ ನಿಜವಾದ ಅರ್ಥ ಮಾಡಿಸಿದ್ದು ನಿನ್ನ ಪರಿಚಯ. ಎಂದು ಖುಷಿ ನೋಡಿರದ ಈ ನನ್ನ ಮುಖದ ಮೇಲೆ ಆ ನಗುವಿನ ಮಳೆ ಸುರಿಸಿದ ನಿನಗೆ ನಾನು ಚರಋಣಿ.
ನನ್ನ ಹುಚ್ಚುತನ, ಮೂರ್ಖತನ,ನೋವು ಎಲ್ಲವನ್ನು ಬದಿಗೊತ್ತಿ, ನನ್ನ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ನಿನ್ನ ಹೆಗಲಿನ ನೆರವು ಕೊಟ್ಟು,ಪ್ರತಿಯೊಂದು ಏಳು ಬೀಳುವಿನಲ್ಲಿ ಸಮನಾಗಿ ಖುಷಿ ಪಟ್ಟು ನೋವುಪಟ್ಟು ನನ್ನ ಯಶಸ್ಸಿನ ನಾಂದಿಯದೆ, ನೋವಿನಲ್ಲಿ ಸಾಂತ್ವನ ಕೊಟ್ಟು ತಾಯಿಯದೆ,ಕಷ್ಟದಲ್ಲಿ ಧ್ಯರ್ಯ ಕೊಟ್ಟು ಅಪ್ಪನದೆ,ದುಃಖದಲ್ಲಿ ದುಃಖ ಹಂಚಿಕೊಂಡು,ಖುಷಿ ಯಲ್ಲಿ ಖುಷಿ ಸಮನಾಗಿ ಹಂಚಿ ಜೀವನದ ಸಂಗಾತಿ ಅನುಭವ ಕೊಟ್ಟೆ, ನಿನ್ನ ಈ ಅಸಾಧ್ಯವಾದ ಋಣವನ್ನು ಎಷ್ಟು ಜನ್ಮದಲ್ಲಿ ತೀರಿಸಲಿ ನಾನು.
ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳು,ಬೆಲೆಕಟ್ಟಲಗದ ಅದ್ಭುತ ನವರತ್ನಗಳು, ಈ ಪ್ರಪಂಚ ತೊರೆದ ಮೇಲೇ ಸ್ವರ್ಗ ಇದೆ ಅನ್ನೋ ಈ ಜಗತ್ತಿಗೆ ಹೆಮ್ಮೆ ಇಂದ ಹೇಳುವೆ ಆ ಸ್ವರ್ಗ ನ ನಾನು ನಿನ್ನಿಂದ ಕಂಡೆ.
ಇಂದು ನಿನ್ನ ಜನುಮದಿನ, ನಿನ್ನ ಹೆತ್ತವರು ನಿಜವಾಗಿಯೂ ಪುಣ್ಯವಂತರು ಎಷ್ಟು ಜನುಮದ ಪುಣ್ಯನೋ ಅವರಿಗೆ ನಿನ್ನಂತ ಮಗಳು ಜನಿಸಿದೆ,ನಿನ್ನ ಹೆತ್ತವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು,ಅವರಿಗೆ ನನ್ನ ಮೊದಲ ಅಭಿನಂದನೆಗಳು.
ಯಾವಾಗಲೂ ನಿನ್ನಲ್ಲಿ ಸಂತೋಷದ ಸಾಗರ ಹರಿಯುತಿರಲಿ, ಎಲ್ಲರ ನೋವಲ್ಲಿ ಭಾಗಿ ಆಗಿ ಅವರ ಕಷ್ಟವೇ ನಿನ್ನ ನೋವು ಅನ್ನೋ ನಿನ್ನ ಮನಸ್ಸು ನಿಜವಾಗಿಯೂ ನಾ ಕಂಡ ಒಂದು ಅದ್ಭುತ,ಎಂದಿಗೂ ಆಕಾಶದ ಎತ್ತರಕ್ಕೆ ಬೆಳೆಯುತಿರು,ನಿನ್ನ ಜೀವನ ಖುಷಿ ಖುಷಿ ಇಂದ ತುಂಬಿ ತುಳುಕಲಿ, ನಿನ್ನನ್ನು ನನ್ನ ಜೀವದಲ್ಲಿ ಸಿಗಲು ಅವಕಾಶ ಮಾಡಿ ಕೊಟ್ಟ ಆ ದೇವರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು.
ನನ್ನ ಜೀವನದ ಕೊನೆಯ ಕ್ಷಣಗಳವರೆಗೂ ನಿನ್ನ ಹಿಂದೆ ಯಾವಾಗಲೂ ಇರುತ್ತೇನೆ,ಯಾವದೇ ನೋವು ಸಂತೋಷ ಏನೇ ಇರಲಿ ನಿನ್ನ ಹಿಂದೆ ನಾನು ಇರುವೆ.ನಿನ್ನ ಜೀವನ ಸುಮಧುರವಾಗಿರಲಿ.
ಹುಟ್ಟು ಹಬ್ಬದ ಹಾರ್ಧಿಕ ಶುಭಯಗಳು, ಯಾವಾಗಲೂ ನಗು ನಗುತ್ತ ಬಾಳು.
ಅಪರಿಚಿತಳಾಗಿ ಬಂದು ಕ್ಷಣ ಮಾತ್ರದ ದಿನಗಳಲ್ಲಿ ನನ್ನ ಅಣು ಅಣುವಿನಲ್ಲಿ ಸೇರಿದ ನಿನ್ನ ಆ ಸವಿ ನೆನಪುಗಳು,

ಅದೇನೋ ಅರಿಯೆ ನಿನ್ನ ಆ ಕಂಗಳ ಮರ್ಮವ ಸೆಳೆಯುತ್ತದೆ ನಿನ್ನಡೆಗೆ ತಾಯಿ ಮಗುವಿನ ಹಾಗೇ,

ತನ್ನ ಮಡಿಲಿನ ಸಾಗರದಷ್ಟು ನೋವಿನ ಅಲೆಗಳ ಬದಿಗೊತ್ತಿ ನೊಂದ ಹೃದಯಗಳ ಆಸೆರೆ ಆಗಿರೋ ನಿನ್ನ ಪ್ರೀತಿಯ ನುಡಿಗಳಿಗೆ ಸರಿಸಾಟಿ ಯಾರು,

ನೀ ಅರಿಯದೆ ಕಟು ಮಾತು ಆಡಿ ಮಗುವಿನಂತೆ ನೊಂದು ಅಳುವ ಆ ನಿನ್ನ ಮನಸು ಆ ದೇವರಿಗೂ ಅಸೂಯೆ ತಂದೀತು,

ನಿಸ್ವಾರ್ಥ ಎಂಬ ಪದದ ಅರ್ಥಕ್ಕೆ ಪ್ರಬಂಧ ವಾದ ನಿನ್ನ ಈ ಸುಂದರ ಜೀವನಕ್ಕೆ ನಿನ್ನಿಂದ ನಗು ಕಂಡ ಸಾವಿರಾರು ನಗು ಮುಖಗಳೇ ಸಾಕ್ಷಿ,

ನನ್ನ ಜೀವನದ ಕೊನೆಯ ಭರವಸೆ ಆಗಿ,ಕೊಟ್ಟ ಅಪಾರ ನೋವುಗಳ ಸಹಿಸಿ,ನಿಜವಾದ ಪ್ರೀತಿ ತೋರಿ,ಮಗ್ಗುವಿನಂತೆ ಮುದ್ದಿಸಿ,ನನ್ನ ಕಣ್ಣಾದ ನಿನಗೆ ಆ ಋಣವ ನಾ ಇನ್ನೆಷ್ಟು ಜನುಮದಲ್ಲಿ ತೀರಿಸಲಿ,

ಸದಾ ಇನ್ನೊಬ್ಬರ ನೋವಿಗೆ ಆಸೆರೆ ಆಗಿ ನಿಂತ ಆ ಹೂವಿನಂತ ಮನಸು,ನಗುವೆ ನಾಚುವಂತ ಅಮೃತ ಹಾಸ,ಯಾವ ಜನುಮದ ಪುಣ್ಯನೋ ನಾ ಕಂಡ ಅದ್ಬುತ ಜೀವಕ್ಕೆ ನನ್ನ ನಮನಗಳು.