ನಾ ಕಂಡ ಕನಸು ..
ಕವನ
ನೀ ಬಂದೆ ನಾ ಕಂಡ ಕನಸಲ್ಲಿ
ಹೂ ಆಗಿ ಅರಳಿದೆ ನನ್ನ ಹೃದಯದಲ್ಲಿ
ದುಂಬಿಯಾಗಿ ಮಧುರ ಹನಿ ಹೀರಿದೆ
ನನ್ನ ಪ್ರೀತಿಯ ಅಮೃತ ನೀ ಸವಿದೆ
ನೀ ಬಂದೆ ನಾ ಕಂಡ ಕನಸಲ್ಲಿ
ಮಧುಚಂದ್ರನ ಬೆಳಕಿನ ಹೊತ್ತಿನಲ್ಲಿ
ನಕ್ಷತ್ರದ ಹಾಗೆ ಭಾವನೆಗಳ ಮಿಂಚು
ಮಿಲನವಾಯಿತು ನಮ್ಮ ಮನ ಹುಣ್ಣಿಮೆಯಿತ್ತು
ನೀ ಬಂದೆ ನಾ ಕಂಡ ಕನಸಲ್ಲಿ
ಮುಂಗಾರು ಮಳೆಯ ಮೋಡದಲ್ಲಿ
ಹನಿಯ ಸ್ಪರ್ಶದ ಸುಖ ಬಹಳ ಸುಂದರವಾಗಿತ್ತು
ನಮ್ಮ ಪ್ರೀತಿಯ ಒಲುಮೆಯ ಸಂಕೇತವಾಗಿತ್ತು
ನೀ ಬಂದೆ ನಾ ಕಂಡ ಕನಸಲ್ಲಿ
ಅಪ್ಪಿಕೊಂಡಿದ್ದೆ ನೀ ನನ್ನ ಮನದಲ್ಲಿ
ಮಾತಿಲ್ಲದ ಮೌನದ ಸಂಜೆಯಾಗಿತ್ತು
ನಿನ್ನ ನೆನಪಿನ ಬಿರುಗಾಳಿ ಬೀಸಿತ್ತು