"ನಾ ಕಂಡ ದೇವರು"

"ನಾ ಕಂಡ ದೇವರು"

ಕವನ

"ನಾ ಕಂಡ ದೇವರು"

ದೇವರೆಸರಿನ ಮಾನವ ನೀನು
ಬಹು ಪಾಲು ದೇವರನ್ನೇ ಹೋಲುವೆ...🙏
ಹಗಲಿರುಳು ದುಡಿದೆ, ನಮಗಾಗಿ ಸವೆದೆ
ನೀ ನೋವನುಂಡು, ನನ್ನಗಲಿಗೆ ನಗುವ ಬಡಿಸಿದೆ
ನೀ ಪಟ್ಟ ಕಷ್ಟ....
ನಿನಗಾದ ನಷ್ಟ.... ‌!
ನನಗಷ್ಟೇ ಗೊತ್ತು....
ಕಲ್ಲಂತೆ ನಿಂತು ಹುಳಿ ಪೆಟ್ಟುಗಳ ಸಹಿಸಿ
ದೇವರಂತೆ ನಗುವುದು ನಿನಗಷ್ಟೇ ಗೊತ್ತು....💐

"ನಿನ್ನ ಮಗನೆಂದು ಹೇಳುವ ಹೆಮ್ಮೆಯಿದೆ ನನಗೆ
ಅದೇ ನನ್ನ ಗತ್ತು........."

ನಾ ದೇವರ ಮಗ.....😊

ಚಿತ್ರ್