ನಾ ಕಂಡ ಹೋಲಿ

ನಾ ಕಂಡ ಹೋಲಿ

ಬರಹ

ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?

ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ
ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು.
ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ನೋಟ ಸಾಮಾನ್ಯ.

ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ?

ಹಬ್ಬ ಬರಲು ಕಾಲೋನಿ ಮಂದಿಯೆಲ್ಲ ಸಂತಸದಿ ನಲಿಯುತಿಹರು
ಹಿರಿಯ ಕಿರಿಯ ಗಂಡು ಹೆಣ್ಣು ಭೇದವಿಲ್ಲದೆ ಕುಣಿಯುತಿಹರು

ಬಣ್ಣಗಳ ಎರಚಿ ಓಕುಳಿಯಲಿ ನಲಿದಾಡಿ
ಕಾಮ ಮದ ಮೋಹ ಸ್ವಾರ್ಥಗಳ ಬದಿಗೊತ್ತಿ
ಬೇಕಿಲ್ಲದ ಪೈಶಾಚೀ ಕೃತ್ಯಗಳ ದಮನಿಸಿ
ಸಮನ್ವಯೀ ಜೀವನಕೆ ದಾರಿ ತೋರಿಪ ಹೋಲಿ

ಮದನನ ಸುಟ್ಟು ಬೂದಿ ಮಾಡಿದ ಮುಕ್ಕಣ್ಣ
ಪ್ರಹ್ಲಾದನ ಸುಡಲು ಹೋದ ಹೋಲಿಕಾಳ ಮದಿಸಿದ ದಿನ
ಪರಮ ಪುರುಷ ಕೃಷ್ಣ ಚೈತನ್ಯರು ಹುಟ್ಟಿದ ದಿನ
ವೃಂದಾವನದಿ ಶ್ರೀ ಕೃಷ್ಣ ನಲಿದ ದಿನ ಈ ಹೋಲಿ

ಆದರೇನು! ಇಂಥ ನಾಡಿನಲಿ ನೋಡುವದೇನು
ಬೀದಿ ಬೀದಿಗಳಲಿ ಪಡ್ಡೆ ಹುಡುಗ ಹುಡುಗಿಯರು
ರುಂಡ ಮುಂಡಗಳಿಗೆ ಬಣ್ಣದ ನೀರು ಸುರುವಿಕೊಂಡು
ಕಾಮ ಮೋಹಗಳ ಪ್ರದರ್ಶಿಸುವ ಈ ದಿನ ಹೋಲಿ