ನಾ ಕಳೆದು ಹೋದೆ

ನಾ ಕಳೆದು ಹೋದೆ

ಕವನ

ಎಲ್ಲಿ ನಾನಿಹೆನೀಗ ಎಂಬ ಅರಿವಿಲ್ಲೆನಗೆ

ಇದ್ದ ಜಾಗವೆ ನನಗೆ ನಿನ್ನ ಹೆಗಲು

ಬಾಲ್ಯವಿದ್ದಿರಲಾಗ ಮನವು ಬಯಸುತಲಿತ್ತು

ಸಗ್ಗ ಎನಿಸುತಲಿತ್ತು ತಾಯ ಮಡಿಲು

 

ಎಲ್ಲ ಬದಲಿದೆ ಈಗ ಏನು ಮೋಡಿಯೊ ಹುಡುಗ

ಮನದೊಳಗೆ ನೀನಿರದ ವೇಳೆಯಿಲ್ಲ

ನಿನ್ನೊಳಗೆ ಒಂದಾಗಿ ಬದುಕಿ ಬಾಳುವ ಆಸೆ

ಬಯಕೆಯಲೆಗಳ ಮೊರೆತ ಬಿಡದು ನಲ್ಲ

 

ಮಾತು ಮರೆತಿಹೆ ನಾನು ನಿನ್ನ ಕನಸುಗಳಲ್ಲಿ

ನಿನ್ನತ್ತ ಸುತ್ತುತಿದೆ ನನ್ನ ಚಿತ್ತ

ಕಣ್ಣು ಮುಚ್ಚಿದರೇನು ತೆರೆದು ನೋಡಿದರೇನು

ನಗುಬೀರಿ ನಿಂತಿರುವ ನಿನ್ನ ಚಿತ್ರ

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ:  ಶ್ರೀ ಅನಂತ್ ಸಿಂಗನಮಲ್ಲಿಯವರ ವಾಲ್ನಿಂದ) 

ಚಿತ್ರ್