ನಾ ಡಿಸೋಜ (NORBERT D’SOUZA)

ನಾ ಡಿಸೋಜ (NORBERT D’SOUZA)

ಬರಹ

ನಾರ್ಬರ್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ ರಂದು ಜನಿಸಿದರು. ಮನೆಯಲ್ಲಿನ ಸಾಹಿತ್ಯಿಕ ಪರಿಸರ, ಮಲೆನಾಡಿನ ನಿಸರ್ಗ ಸೌಂದರ್ಯ ಹಾಗೂ ಪುಸ್ತಕಗಳ ಪ್ರಭಾವದಿಂದ ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಬರೆದ 'ಏನ್ಡೇಂಜರ್ರೋ' ಎಂಬ ಅನುಭವ ಕಥನವೇ ಇವರ ಮೊದಲ ಲೇಖನ. ಅಂದೇ ಅವರ ಪ್ರತಿಭೆಗೆ ಗೆಳೆಯರಿಂದ ಶಿಕ್ಷಕರಿಂದ ಉತ್ತಮ ಪ್ರೋತ್ಸಾಹ ದೊರೆತು ಅವರು ಬರಹಗಾರರಾಗಿ ಬೆಳೆಯಲು ಅನುವಾಯಿತು.
ತಿರುಗೋಡಿನ ರೈತಮಕ್ಕಳು, ಮುಳುಗಡೆ, ದ್ವೀಪ, ಕುಂಜಾಲು ಕಣಿವೆಯ ಕೆಂಪು ಹೂವು, ಕಾಡಿನ ಬೆಂಕಿ, ಇಗರ್ಜಿ ಸುತ್ತಲಿನ ಮನೆಗಳು ಮುಂತಾದ ಮೂವತ್ತು ಕಾದಂಬರಿಗಳನ್ನೂ ನಿನ್ನುದ್ಧಾರವೆಷ್ಟಾಯ್ತು, ಸ್ವರ್ಗದ ಬಾಗಿಲಲ್ಲಿ ನರಕ ಎಂಬಿತ್ಯಾದಿ ಆರು ಕಥಾಸಂಕಲನಗಳನ್ನೂ ಹಲವಾರು ನಾಟಕ, ಶಿಶುಸಾಹಿತ್ಯ, ಬಾನುಲಿನಾಟಕಗಳನ್ನೂ ರಚಿಸಿರುವ ನಾ ಡಿಸೋಜರ ಕೃತಿಗಳು ಕೊಂಕಣಿ, ಮಲಯಾಳ, ತಮಿಳು, ತೆಲುಗು ಭಾಷೆಗಳಿಗೂ ಅನುವಾದಗೊಂಡಿವೆ.
ಕರ್ನಾಟಕದ ಕ್ರೈಸ್ತ ಪ್ರಪಂಚವನ್ನು ಸಮರ್ಥವಾಗಿ ಬಿಂಬಿಸಿದ ಯಶಸ್ವೀ ಲೇಖಕರಿವರು. ಚರ್ಚ್ ಪರಿಸರದ ಹಾಗೂ ಚರ್ಚ್ ಹೊರಗಿನ ಎರಡೂ ಕ್ಷೇತ್ರಗಳಲ್ಲೂ ಇವರ ಸಾಹಿತ್ಯಕೃಷಿ ಉತ್ತಮ ಫಲ ತೋರಿದೆ. ಜಾನಪದ ಹಾಗೂ ಇತಿಹಾಸ ಕ್ಷೇತ್ರದಲ್ಲೂ ಇವರ ದುಡಿಮೆ ಇದೆ.
ಸಾಹಿತ್ಯ ಕೃಷಿಗಾಗಿ 'ರಾಜ್ಯೋತ್ಸವ ಪ್ರಶಸ್ತಿ' ಮೊದಲಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ನಾಡಿ ೧೯೮೮-೯೧ರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕವಾಗಿದ್ದರು. ಸಾಗರದ ಲೋಕೋಪಯೋಗಿ ಇಲಾಖೆಯ ನೌಕರರಾಗಿದ್ದ ಇವರು ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರೂ ಆಗಿದ್ದರು. ಇತ್ತೀಚೆಗೆ ಶೀಮೊಗ್ಗೆಯ ಕುವೆಂಪು ವಿಶ್ವವಿದ್ಯಾಲಯವು ನಾ ಡಿಸೋಜರಿಗೆ ಗೌರವ ಡಾಕ್ಟರೆಟ್ ಪ್ರದಾನಮಾಡಿದೆ.

ನಾ ಡಿಸೋಜ ರಚಿಸಿರುವ ಕೃತಿಗಳು

ಕಾದಂಬರಿ
೧. ಅಜ್ಞಾತ ೨. ಆಸರೆ ೩. ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು ೪. ಇಗರ್ಜಿಯ ಸುತ್ತಲಿನ ಮನೆಗಳು
೫. ಈ ನೆಲ ಈ ಜಲ ೬. ಒಂದು ಜಲಪಾತದ ಸುತ್ತ ೭. ಒಡ್ಡು ೮. ಕಾಡಿನ ಬೆಂಕಿ ೯. ಕುಂಜಾಲು ಕಣಿವೆಯ ಕೆಂಪು ಹೂವು
೧೦. ಕೆಂಪು ತ್ರಿಕೋನ ೧೧. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ೧೨. ಕ್ರಯ ವಿಕ್ರಯ ೧೩. ಗಾಂಧಿ ಬಂದರು
೧೪. ಜೀವ ಕಳೆಯ ಮಹಾಸತಿ ೧೫. ಜೀವಕಳೆ ೧೬. ದುರ್ಗವೆಂಬ ವ್ಯೂಹ ೧೭. ದ್ವೀಪ ೧೮. ನಡುವೆ ನಿಂತ ಜನ
೧೯. ನೀರಮ್ಮ ವ್ಯಾಧಿ ಪುರಾಣ ೨೦. ನೆಲೆ ೨೧. ಪ್ರಜ್ಞಾಬಲಿ ೨೨. ಪ್ರೀತಿಯೆಂಬ ಚುಂಬಕ ೨೩. ಪ್ರೀತಿಯೊಂದೇ ಸಾಲದೇ?
೨೪. ಬಂಜೆ ಬೆಂಕಿ ೨೫. ಮಂಜಿನ ಕಾನು ೨೬. ಮಾನವ ೨೭. ಮುಳುಗಡೆ ೨೮. ವಿಷವರ್ತುಲ ೨೯. ವಿಷಾನಿಲ ೩೦. ವೀರಭದ್ರ ನಾಯಕ ೩೧. ಶಿವನ ಡಂಗುರ ೩೨. ಸುವಾಸಿನಿ

ಐತಿಹಾಸಿಕ ಕಾದಂಬರಿ
೧. ಇಕ್ಕೇರಿಯಲ್ಲಿ ಕ್ರಾಂತಿ ೨. ಚೆನ್ನಿ ಚೆನ್ನಮ್ಮ ಚೆನ್ನಮ್ಮಾಜಿ ೩. ರಾಗ ವಿರಾಗ ೪. ಶೃಂಗೇರಿಯಲ್ಲಿ ಶಾಂತಿ

ಕಥಾಸಂಕಲನ
೧. ಇಪ್ಪತ್ತೈದು ಕಥೆಗಳು ೧೯೮೯ ೨. ಗಿಳಿಯೇ ಓ ಗಿಳಿಯೇ ೩. ನಿನ್ನುದ್ಧಾರವೆಷ್ಟಾಯ್ತು ೪. ಪ್ರಜ್ಞಾ ಎಂಬ ನದಿ ೫. ಸಣ್ಣಕಥೆ ೧೯೮೭
೬. ಸ್ವರ್ಗದ ಬಾಗಿಲಲ್ಲೂ ನರಕ

ಜಾನಪದ
೧. ಚಿತ್ತಾರ ೨. ಹೂವ ಚೆಲ್ಲುತ ಬಾ

ನಾಟಕ
೧. ತಬ್ಬಲಿ ೨. ದೇವರಿಗೇ ದಿಕ್ಕು ೩. ದ್ವೀಪ ೪. ಬೆತ್ತಲೆ ಸೇವೆ ೫. ಭೂತದ ಎದುರು ಬೇತಾಳ

ಮಕ್ಕಳ ಪುಸ್ತಕಗಳು
೧. ಭೂತ (ನಾಟಕ) ೨. ಮುಂದೇನು? (ನಾಟಕ) ೩. ಗೇರಸೊಪ್ಪೆ ೪. ಕದಂಬ ಮಯೂರಶರ್ಮ ೫. ಬಾಲಗಂಧರ್ವ
೬. ಪುಲಿನ ಬಿಹಾರಿದಾಸ್ ೭. ಸದಾಶಿವ ಬ್ರಹ್ಮೇಂದ್ರ ೮. ಶರಾವತಿ ೯. ಸಂಗೀತಪುರ ೧೦. ಸೊರಬ ೧೧. ಬೆಳಕಿನೊಡನೆ ಬಂತು ನೆನಪು ೧೨. ಹಕ್ಕಿಗಳಿಗೆ ಬಂತು ಬಣ್ಣ ೧೩. ನೇತ್ರಾಣಿ ಗುಡ್ಡಕ್ಕೆ ಯಾತ್ರೆ ೧೪. ದಂತ ಮತ್ತು ಗಂಧ ೧೫. ಆನೆ ಬಂತೊಂದಾನೆ
೧೬. ಆನೆ ಹುಡುಗ ಅಬ್ದುಲ್ಲಾ ೧೭. ಗೋಡೆ ಬೇಡ ೧೮. ಕಾಡಾನೆಯ ಕೊಲೆ ೧೯. ಗೋಪಿಯ ಗೊಂಬೆ ೨೦. ಕೋಳಿ ಅನಂತ

ರೇಡಿಯೋ ನಾಟಕಗಳು
೧. ಭುವಿಗೆ ಬಂದ ಬೆಳಕು ೨. ರೂಪದರ್ಶಿ ೩. ಹಿಪ್ಪಿ ಮತ್ತು ಅಜ್ಜಿ ೪. ಮಲೆನಾಡಿನ ಮದಕರಿ ೫. ಊರಾಳು ಅರಮನೆಗೆ ಜನ ಬಂದರು
೬. ಬೆಳಗಾಗಿ ನಾನೆದ್ದು ೭. ಹಳೆಯ ಬಳಗಕ್ಕೆ ಜೈ (ಮಕ್ಕಳ ನಾಟಕ)

ಕಿರುಕಾದಂಬರಿ
೧. ತಿರುಗೋಡಿನ ರೈತ ಮಕ್ಕಳು ೨. ಗುಡಿಗಾರರು ೩. ತಿರುವುಗಳು ೪. ಹಕ್ಕಿ ಹಾರಿತು ೫. ನಾಯಕ ೬. ಜಾತ್ರೆಯಲ್ಲಿ ಕಂಡವಳು
೭. ಸುರಂಗ ೮. ಶರಾವತಿ ಎಂಬ ಮಾನಿನಿ ೯. ಮಹಾಸತಿ ೧೦. ಇತಿಹಾಸದ ಕಪ್ಪು ಚುಕ್ಕೆ ೧೧. ಎರಡು ರಾತ್ರಿ ಒಂದು ಹಗಲು