ನಾ ನಿನ್ನೊಳು ನೀ ನನ್ನೊಳು

ನಾ ನಿನ್ನೊಳು ನೀ ನನ್ನೊಳು

ಕವನ

ನಾನು ನಾನು ನಾ ನೀನು ನೀನು ನೀ

ನೀನು ನೀನು ನಾ ನಾನು ನಾನು ನೀ

 

ಹೊಸೆ ಹೊಸೆವ ಆಟ ಕಣ್ ಕಣ್ಣ ನೋಟ

ಹನಿ ಹನಿಗು ಚೈತ್ರ ಪಾಠ ಮತಿ ಮತಿಗು ಹೂವಿನಾಟ

ಹಸಿ ಹಸಿದು ಬಂದ ಚಿತ್ತದೊಳು ಚೆಂದ

ನಲಿ ನಲಿವ ಪ್ರೀತಿಯಿಂದ ಸ್ನೇಹದಲಿ ಬಾರೆಯೆಂದ

 

ಮಸೆ ಮಸೆವ ಕೂಟ ಹೊತ್ತಾರೆ ಮಾಟ

ಉದ ಉದಯ ಪ್ರೇಮ ಪಾಠ ಆತ್ಮದೊಲು ಒಲವಿನೂಟ

ಚೆಲು ಚೆಲುವಿನಾಟ ಮಧು ಚಂದ್ರ ಬಂದ

ಕನ ಕನಸ ಸೆಳೆವೆನೆಂದ ನನಸಿನಲಿ ಒಲವುಯೆಂದ

 

ಕುಶಿ ಕುಶಿಯ ಪಡೆದು ಹೊರಟಾಗ ಪೇಟ

ಹೊಸ ಹೊಸಗೆ ಬೆಸುಗೆಯಾಟ ನಲಿವಿನೊಳು ಕೂಡುವಾಟ

ತನು ತನುವಿನಾಟ ಹೊಸತನದ ಕಂದ

ಬರ ಬರಲು  ಹರುಷವೆಂದ ಜೀವನದಿ ಪುಣ್ಯವೆಂದ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್