ನಾ ನೋಡಿದ ಅರ್ಧ ಚಿತ್ರ...

ನಾ ನೋಡಿದ ಅರ್ಧ ಚಿತ್ರ...

ಬರಹ

  ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ ಗೊತ್ತಿಲ್ಲ. ವೀಕ್ಷಿಸಿದ ಕೇವಲ ೩೦ ನಿಮಿಷದಲ್ಲಿ ನೆಚ್ಚಿನ ಹಾಡು ಬಂದು ಹೋಯಿತು. ಹೀರೊ.ಹೀರೋಯಿನ್ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡ ವಿಷಯಗಳ ದರುಶನವೂ ಆಯಿತು. ನೋಡಿದ ಅರ್ಧ ಗಂಟೆಯ ವಿರ್ಮಶೆ ಇಲ್ಲಿದೆ. ಎರಡೂ ವರೆ ಗಂಟೆ ಚಿತ್ರ ನೋಡಿದಾಗಲೇ ಚಿತ್ರ ವಿರ್ಮಶೆ ಮಾಡುವುದು ಕಷ್ಟ. ಅಂತದ್ರಲ್ಲಿ ಇದು ಸರೀನಾ ಅನ್ನಬಹುದು. ಇದು ನಿಜಾನೆ. ಆದ್ರೂ, ಅರ್ಧಗಂಟೆಯ ಚಿತ್ರ ಕಾಡುತ್ತಿದೆ. ಸಾಲಾಗಲು ಪ್ರಯತ್ನಿಸುತ್ತಿದೆ. ಅದಕ್ಕೇನೆ ಮನಸ್ಸು ಈಗ ಅಕ್ಷರಗಳ ಗುಲಾಮ..

ಚಿತ್ರ ನಟ ರಾಜ್ . ಗೆಳತಿ ಬಿಂದು. ಇದು ಅರ್ಧಗಂಟೆಯಲ್ಲಿ ತಿಳಿದ ಸತ್ಯ. ಇಬ್ಬರಲೂ ಪ್ರೀತಿ. ಅವನಿಗೆ ಅಂತರಾಳದ ಪ್ರೀತಿ ಹೇಳಲಾಗದ ಸ್ಥಿತಿ. ಬಿಂದು ಗೆ ಗೆಳೆಯನ ಮನ ತಿಳಿಯುವ ಕುತೂಹಲ. ಇದರ ಮಧ್ಯೆ ಕಾಡಲ್ಲಿ ಕುಳಿತು ಇಬ್ಬರ ಪರಸ್ಪರ ಪ್ರೀತಿಯ ಸುತ್ತದ ಮಾತು-ಕಥೆ. ಆಗಲ್ಲ ಅಂದು ಹೋಗುವ ನಾಯಕ ಕೈಹಿಡಿದು ನಾ..ನಿನ್ನ ಪ್ರೇಯಸಿ ಅಂದು ಬಿಡುವ ಬಿಂದು. ಇಷ್ಟಾದ ಮೇಲೆ ಅದಲ್ಲೊಂದು ಹಾಡು...

ಗಾಳಿಯೇ ನೋಡು ಬಾ...
ದೀಪದಾ ನರ್ತನ...

ಹೌದು!!! ಇದು "ಸಂಚಾರಿ" ಚಿತ್ರದ ಕ್ಲೈಮ್ಯಾಕ್ಸ್ನ ಮುಂಚೆ ನಡೆಯುವ ದೃಶ್ಯ. ಅಂತ್ಯದಲ್ಲಿ ಖಳನಾಯಕರು ಬಂದು ಹೋಗುತ್ತಾರೆ. ಅವರು ಬಂದ ಮೇಲೆ ಮುಂದೇನಾಗುತ್ತದೆ ಅಂತ ಹೇಳೋದು ಬೇಡ. ರಾಜ್ ಆಕ್ಷನ್ ಶುರು. ಬಿಂದು ರೋದನ
ಆರಂಭ. ಇದಾದ ಮೇಲೆ ಏನ್ ಆಯಿತು. ಗೊತ್ತಿಲ್ಲ. ಅಷ್ಟು ಹೊತ್ತಿಗೆ ಹೊರಗೇ ಬರಲೇ ಬೇಕಿತ್ತು. ಕಾರಣ. ಅದು "ಸಂಚಾರಿ" ನೋಡಿದವರ ಅಭಿಪ್ರಾಯ ಕೇಳುವ ಸಮಯ.

ಫೈಟ್ಸ್ ಚೆನ್ನಾಗಿವೆ ಅಂದ್ರು...

ಹಾಡು ಗೆದ್ದಿವೆ ಅಂತ ಮತ್ತೆ..ಮತ್ತೆ ಹೇಳಿದರು.

ಕ್ಲೈಮ್ಯಾಕ್ಸ್ ಇನ್ನು ಸರಿ ಹೋಗಬೇಕಿತ್ತು ಅಂದರು.

ಮೊದಲ ದಿನದ ರೆಸ್ಪಾನ್ಸ್ ಬಹುತೇಕ ನಂಬಿಕೆಗೆ ಅರ್ಹ ಅಲ್ಲವೇ ಅಲ್ಲ. ಎರಡನೇ ದಿನವೋ. ಮೂರನೇ ದಿನವೋ ಬಣ್ಣದ ಬಣ್ಣ ಬಯಲಾಗುತ್ತದೆ. ಅಲ್ಲಿವರೆಗೂ ಕಾಯಬೇಕು. ಆದ್ರೆ, ಗೋವಿಯವರ ಕಥೆ ಬಗ್ಗೆ ನೋಡಿದವರು ಅಭಿಪ್ರಾಯ ಹೇಳಿದ್ದಾರೆ. ಅರ್ಜುನ್ ಸಂಗೀತ ಗೆದ್ದಿದೆ. ಹಾಡನ್ನ ತೆರೆಗೆ ತರುವಲ್ಲಿ ಕಿರಣ್ ಗೋವಿ ಸೋತಿಲ್ಲ. ರವಿವರ್ಮ ಸಾಹಸ ಇಷ್ಟವಾಗ್ತವೆ. ನಾಯಕ ರಾಜ್ ಚೆನ್ನಾಗಿ ಫೈಟ್ ಮಾಡಿದ್ದಾರೆ. ಬಿಂದು ಪಾತ್ರಧಾರಿ ಬಿಯಾಂಕಾ ಎಕ್ಸಪ್ರೆಷನ್ ಚೆನ್ನಾಗಿವೆ. ರಾಜ್ ನಟನೆ ಇನ್ನಷ್ಟು ಮಾಗಬೇಕು. ಇಷ್ಟು "ಸಂಚಾರಿ" ಸಿನೆಮಾ. ಇನ್ನಷ್ಟು ಪೂರ್ತಿ ಚಿತ್ರ ನೋಡಿದ ಮೇಲೆ ಬರೆಯುತ್ತೇನೆ .ಸಾರಿ..ಅರ್ಧ ಚಿತ್ರ ನೋಡಿ ಬರೆದಿದ್ದಕ್ಕೆ...

- ರೇವನ್ ಪಿ.ಜೇವೂರ್