ನಾ ಮಾತಾಡಲೇ.... !!!

ನಾ ಮಾತಾಡಲೇ.... !!!

ಕವನ

 

ನಾ ಮಾತಾಡಲೇ.... ನಾ ಮಾತಾಡಲೇ... ನನ್ನೊಳಗಿನ ಮಾತು ಬಿಚ್ಚಿಡಲೇ

ಪ್ರತಿ ಹೊತ್ತು ಮತ್ತೇರುವ ಮುತ್ತಿನ ಮಾತುಗಳ್ನ, ಹೊತ್ತಿಗೆಯೊಳಗೆ ಒತ್ತಿ ಅಚ್ಚುಕಿಸಲೇ

ಅತ್ತ ಇತ್ತ ಕಾಣದೆ ಗೊಣಗಿದ ಮಾತುಗಳ್ನ, ಗಂಧ ಚೆಂದದ ಅಂದದೊಳಗೆ ಗಮ್ಮತ್ತು ಮುಚ್ಚಿಡಲೇ

ಸುತ್ತ ಮುತ್ತ ಕಾಡಿದ ವಿಷಾದ ಮಾತುಗಳ್ನ, ವಿಷ ಹುತ್ತದೊಳಗೆ ವಿಪತ್ತು ಕಚ್ಚಿಬಿಡಲೇ

ಮತ್ತೆ ಮತ್ತೆ ಮಾತಿನ ಬುತ್ತಿ ಹೊತ್ತು, ಒಲವಿನ ಹೊಳಪು ನಿನ್ನೊಳಗೇ ತುಂಬಿ ಬಿಡಲೇ...!!!

File attachments