ನಾ ಹೇಗೆ ಮರೆಯಾಗಲಿ ?
ಕವನ
ನಿನ್ನೆದೆಯ ತುಂಬಾ ನಾನಿರಲು,
ಸುರಿದ ಮಳೆಯ ಪ್ರತಿ ಹನಿಯಲಿ ಪ್ರೀತಿಯಿರಲು,
ನಿನ್ನಿಂದ ನಾ ಹೇಗೆ ಮರೆಯಾಗಲಿ,
ಮಳೆಗೆ ನಿನ್ನ ಎದೆಯಲಿ ನಾ ನೆನೆಯಲು .
ಹಸಿರಾಗಿದೆ ನಿನ್ನ ಮನದ ಬಯಲು,
ಪ್ರೀತಿಮಳೆಯು ಸುರಿಯುತಿರಲು,
ನಿನ್ನಿಂದ ನಾ ಹೇಗೆ ಮರೆಯಾಗಲಿ
ಚಿಗುರುವ ಹಸಿರಿನ ಜೀವಳಾ ನಿನ್ನಲ್ಲಿರಲು.
ನಿನ್ನ ಮನದಲಿ ನಾ ಇರುವೆನು,
ಆ ತಂಪಿನಲಿ ನೆನೆಯುತ ಕುಳಿತಿಹೆನು,
ನಿನ್ನಿಂದ ನಾ ಹೇಗೆ ಮರೆಯಾಗಲಿ,
ಆ ತಂಪಲ್ಲಿ ಅಡಗಿದ ಸಿಹಿ ಅನುಭವ ನೀನಾಗಿರಲು
ನನ್ನ ಪ್ರತಿಬಿಂಬವು ನೀನು,
ನಿನ್ನ ಪ್ರತಿಬಿಂಬವು ನಾನು,
ನಿನ್ನಿಂದ ನಾ ಹೇಗೆ ಮರೆಯಾಗಲಿ,
ನಾ ಕಾತರಿಸಿ ನೋಡುವ ದರ್ಪಣದಲಿ ನೀ ನಗಲು
ಅನುದಿನ ನಿನ್ನ ನೆನೆಪಿನ ಹಾಸು
ಮನದ ಕನಸಲಿ ಕೆರಳಿಸುತಿರಲು
ನಾ ಹೇಗೆ ಮರೆಯಾಗಲಿ ನಿನ್ನಿಂದ
ನನ್ನ ದಿನಚರಿ ನಿನ್ನ ಎದೆಯೊಳಗಿರಲು.
Comments
ಉ: ನಾ ಹೇಗೆ ಮರೆಯಾಗಲಿ ?