ನಾ ಹೇಗೆ ಹೇಳಲೇ...

ನಾ ಹೇಗೆ ಹೇಳಲೇ...

ಬರಹ

ಗುಟ್ಟಾಗಿ ಹೇಳುವೆನೆ ನನಗೆ ಆಸೆಗಳಿವೆ ನೂರೊ೦ದು...

ಸಿಟ್ಟಾಗಿ ಹೇಳುವೆನೆ ಬೇರೊಬ್ಬನ ಕನಸಿನಲ್ಲಿ ನಿನ್ನ ನಾ ಸಹಿಸಲಾರೆನೆ೦ದು...

ಭಕ್ತನಾಗಿ ಹೇಳುವೆನೆ ನನ್ನೆದೆಯ ಗರ್ಭಗುಡಿಯಲ್ಲಿ ನೀನೇ ದೇವಿ ಎ೦ದು...

ಕಳ್ಳನಾಗಿ ಹೇಳುವೆನೆ ನಿನ್ನ ಕದ್ದು ಕದ್ದು ನೋಡುವ ಖದೀಮ ನಾನೆ೦ದು...

ರೋಗಿಯಾಗಿ ಹೇಳಲೇ ನನ್ನ ಕಾಡುವ ಪ್ರಿಯವಾದ ರೋಗ ನಿನ್ನ ನೆನಪೆ೦ದು...

ಯೋಗಿಯಾಗಿ ಹೇಳುವೆನೆ ನಿನ್ನ ಹೆಸರೇ ನನ್ನ ಜಪಮ೦ತ್ರವೆ೦ದು..

ವಿರಹಿಯಾಗಿ ತೋರಿಸಲೆ ನೀನಿಲ್ಲದ ಪ್ರತಿ ಉಸಿರು ಎನ್ನ ಜೀವವ ಸುಡುವುದೆ೦ದು...

ಕವಿಯಾಗಿ ವಾದಿಸಲೆ ಕಲೆ ಇಲ್ಲದ ಪೂರ್ಣ ಚ೦ದ್ರನೇ ನಿನ್ನ ಮೊಗವೆ೦ದು...

ಹುಚ್ಹನಾಗಿ ಹುಡುಕಲೆ ಎನ್ನ ಹೃದಯದಿ ಮೂಡಿದ ನಿನ್ನ ಕಾಲ ಹೆಜ್ಜೆಗಳನ್ನು...

ನಾ ಹೀಗೆ ಹೇಳಲೆ ಇಲ್ಲ ಹೇಗೆ ಹೇಳಲೇ...

ನೀನಿಲ್ಲದ ಪ್ರತಿ ಗಳಿಗೆಯು ನಾ ಹೇಗೆ ಕಳೆಯಲೇ...