*ನಿಂಬೆಹಣ್ಣು*( ಕುಸುಮ ಷಟ್ಪದಿ)

*ನಿಂಬೆಹಣ್ಣು*( ಕುಸುಮ ಷಟ್ಪದಿ)

ಕವನ

ಬಿಸಿಲಲ್ಲಿ ಬಂದವರ

ಹಸಿವನ್ನು ನೀಗಿಸಿದೆ

ರಸದಲ್ಲಿ ಜೀವವನು ರಕ್ಷಿಸುತಲಿ|

ಜಸವನ್ನು ಜೀವನದಿ

ಹಸನಾಗಿ ತರುತ್ತಲಿ

ವಸನವನು ದೂರಕ್ಕೆ ಸರಿಸುತ್ತಲಿ||

 

ಮಾಟಮಂತ್ರದೊಳಲ್ಲಿ

ಕಾಟವನು ಕೊಡಲಲ್ಲಿ

ದಾಟಿದರೆ ಕೈಕಾಲು ನೋವುಗಳಲಿ|

ಸಾಟಿಯಿಲ್ಲದ ಹಣ್ಣು

ತೋಟದೊಳು ಮುಳ್ಳಿನಲಿ

ಘಾಟಿಮನುಜರು ಪೂಜೆಯಲಿ ಬಳಸುತ||

 

ಎಳನಿಂಬೆ ಗಜನಿಂಬೆ

ಜಳಕದಲಿ ತಲೆಹೊಟ್ಟು

ತಳದಿಂದ ಪರಿಪೂರ್ಣ ಶುಚಿಯಾಗಿಸಿ|

ಫಳಫಳನೆ ಕೂದಲದು

ಹೊಳೆಯುತ್ತ ಶೋಭಿಸಿದೆ

ಚಳಕವನು ತೋರಿಸುತ ಮೆರೆಯುತ್ತಲಿ||

 

ಉರದೊಳಗೆ ಪಿತ್ತವದು

ಶರಬತ್ತು ಪಾನಕವು

ಶರವೇಗದಲಿ ನೋವು ದೂರವಾಗಿ|

ಪರಿಶಮನ ಚಣದಲ್ಲಿ

ಧರೆಯಲ್ಲಿ ದೊರೆಯವುದು

ತರತರಾದುಪಯೋಗ ನೀಡುತ್ತಲಿ||

 

ಸಂಜೀವಿನಿಯದು ತಾ

ನಂಜದೆಯೆ ಜೀವಕ್ಕೆ

ನಂಜಿಲದ ಹಣ್ಣಾದ ನಿಂಬೆಹಣ್ಣು|

ಅಂಜಿದರೆ ದೃಷ್ಟಿಗಿದು

ಪಂಜಿನಂತೆಯೆ ಹೊಳೆದು

ಕುಂಜವಾಗಿಸುತ ದೃಢಕಾಯವನ್ನು||

 

-*ಶಂಕರಾನಂದ ಹೆಬ್ಬಾಳ*

ಕನ್ನಡ ಉಪನ್ಯಾಸಕರು

ಸ ಪ ಪೂ ಕಾಲೇಜು ರಾಂಪೂರ

ಜಿ.ಬಾಗಲಕೋಟ 

 

ಚಿತ್ರ್