ನಿಂಬೆ ಗಿಡ

ನಿಂಬೆ ಗಿಡ

ಬರಹ

ರಚನೆ: ಲಕ್ಷ್ಮಣ ರಾವ್

ನಾನು ಚಿಕ್ಕವ ನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆ ಗಿಡದಿಂದೊಂದು ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದು ನಂಬಿಕೆ ಇಡಬೇಡಾ ಮರಿ
ಈ ಪ್ರೇಮವು ಸಹ ನಿಂಬೆ ಗಿಡದಂತೆ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಓದಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯಕಾಂತಿ ಮೊಗವೆತ್ತಿ ತಿರುಗುವಂತೆ
ಹುಡುಗಿಯ ಮೋಹದಲ್ಲಿ ಅಪ್ಪನ ಮಾತನ್ನ ಮರೆತೆ | ನಿಂಬೆ ಗಿಡ|

ನಿಂಬೆ ಗಿಡದ ರೆಂಬೆ ರೆಂಬೆಯಲ್ಲು ನೂರು ನೂರು ಮುಳ್ಳೂ
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ದ ಕಪಟ ಸುಳ್ಳೂ
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ದಿ ಬಂತೆ ಎಂದು | ನಿಂಬೆ ಗಿಡ|