ನಿಜವಾದ ಗುರು..

ನಿಜವಾದ ಗುರು..

ಕವನ

ಗುರುವಿನ ರೂಪದಲ್ಲಿರುವ 
ದೇವರ ಸಮಾನನಾದ ವ್ಯಕ್ತಿ ನೀವು 
ಸ್ನೇಹ ಪ್ರೀತಿ ಗೌರವದಿಂದ 
ಮನಸ್ಸು ತುಂಬಿದ ಗಣ್ಯವ್ಯಕ್ತಿ ನೀವು 
ಜ್ಞಾನದ ಭಂಡಾರ ತಿಳಿದಿರುವ 
ದೇವಿ ಸರಸ್ವತಿಯ ಪುತ್ರ ನೀವು 
ನಿಮ್ಮ ಕೋಮಲವಾದ ವಾಕ್ಯಗಳಿಂದ 
ಎಲ್ಲರ ಮನಸ್ಸು ಗೆದ್ದ ಅರಸ ನೀವು 
ವಿದ್ಯಾರ್ಥಿಯರಲ್ಲಿ ನಂಬಿಕೆಯನ್ನು 
ತುಂಬುವ ನಂಬಿಕಾಸ್ತ ನೀವು 
ಬಡವರಿಗೆ ಜ್ಞ್ಯಾನ ದಾನ ಮಾಡುವ 
ದಾನಶೂರ ಕರ್ಣನ ಮಿತ್ರ ನೀವು 
ಒಳ್ಳೆಯದನ್ನೇ ತುಂಬಿಕೊಂಡಿರುವ 
ಹಂಪೆಯಲ್ಲಿಯ ಒಂದು ಶಿಲೆಯು ನೀವು 
ಕರ್ನಾಟಕದ ಕನ್ನಡ ನಾಡು ಮೆಚ್ಚುವ 
ಕರುನಾಡಿನ ಜೀವ ನೀವು 
ಅಜೀವ ಜೀವಗಳಿಗೆ ಜೀವವನ್ನು ತುಂಬಿದ 
ರತ್ನ ಶಿರೋಮಣಿ ನೀವು 
ವಿದ್ಯಾರ್ಥಿಗಳಿಂದ ಹೆಮ್ಮೆ ಪಡೆದುಕೊಂಡಿರುವ 
ಏಕೈಕ ದೇವರ ಸಮಾನದ ಗುರು ನೀವು