ನಿತ್ಯನೂತನ‌ - ಗೆಳೆತನ

ನಿತ್ಯನೂತನ‌ - ಗೆಳೆತನ

ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ನಮ್ಮ ವಯಸ್ಸಿನವರೇ ಆಗಿರುತ್ತಾರೆ. ಅವರ ಜೊತೆ ನಾವು ಮನಬಿಚ್ಚಿ ಮಾತನಾಡುವಷ್ಟು ನಮ್ಮ ತಂದೆ ತಾಯಿಯರ ಜೊತೆಯೂ ಮಾತನಾಡುವುದಿಲ್ಲ. ಅಂಥ ಗೆಳೆಯರ ಜೊತೆ ಮಾತನಾಡುವಾಗ ಮನಸ್ಸಿಗೆ ತುಂಬಾ ನಿರಾಳ ಅನ್ಸುತ್ತೆ.

ಪ್ರೇಮಿಗಳ ದಿನದಂತೆ ಈ ಗೆಳೆಯರ ದಿನವೂ ಸಹ ಪಾಶ್ಚಿಮಾತ್ಯರಿಂದ ನಮಗೆ ಬಳುವಳಿಯಾಗಿ ಬಂದಿದ್ದರೂ ಸಹ
ಸಮಾಜದ ಇತರ ವಿಶೇಷ ದಿನಗಳ ಮಧ್ಯೆ ಹಾಸು ಹೊಕ್ಕಾಗಿದೆ. ಸ್ನೇಹ ನಿಜಕ್ಕೂ ಒಂದು ನವಿರಾದ ಸಂಬಂಧ. ಪ್ರತಿನಿತ್ಯವೂ ಒಂದು ರೀತಿಯ ವಿಶೇಷ ಅನುಭವವನ್ನು ಕೊಡುವ ಅನುಬಂಧ.

ನನ್ನ ಬದುಕಿನ ವಿವಿಧ ಹಂತಗಳಲ್ಲಿ ನನಗೆ ಸಿಕ್ಕ ಗೆಳತಿಯರು ತುಂಬಾ ವಿರಳ. ಅದರಲ್ಲೂ ಆತ್ಮೀಯರಾದವರು ಬೆರಳೆಣಿಕೆಯಷ್ಟು ಮಾತ್ರ.
ಯಾಕೆಂದರೆ ಸಿಕ್ಕ ಸಿಕ್ಕವರೊಂದಿಗೆ ಗೆಳೆತನ ಬೆಳೆಸುವ ಸ್ವಭಾವ ನನ್ನದಲ್ಲ.

ಒಳ್ಳೆಯ ಗೆಳೆಯರನ್ನು ಗುರುತಿಸಲು ಸಾಧ್ಯವಾಗುವುದೇ ನಮ್ಮ ಕಷ್ಟದ ಸಮಯದಲ್ಲಿ . ನಮ್ಮ ಜೀವನದಲ್ಲಿ ಎಷ್ಟು ಜನ ಸ್ನೇಹಿತರು ಇದ್ದಾರೆ ಅನ್ನೋದಕ್ಕಿಂತ ಎಷ್ಟು ಒಳ್ಳೆಯ ಸ್ನೇಹಿತರು ಇದ್ದಾರೆ ಅನ್ನೋದೆ ಮುಖ್ಯ. ಸ್ನೇಹಿತರು ಸಿಕ್ಕಾಗ ಪ್ರಪಂಚವನ್ನು ನೋಡುವ ದೃಷ್ಟಿಕೋನ ಬದಲಾಗತೊಡಗುತ್ತದೆ. ಪ್ರತಿಯೊಂದು ಅನುಭವವೂ ನಮ್ಮನ್ನು ಪಕ್ವವಾಗಿಸುತ್ತದೆ. ಬದುಕು ಸಾಗುತ್ತಲೇ ಇರುತ್ತದೆ. ಗೆಳೆತನದ ರೀತಿ ನೀತಿಗಳು ಪಾಠಗಳನ್ನು ಕಲಿಸುತ್ತಾ ಬರುವಾಗ ನಮ್ಮೊಳಗಿನ ನಾವು ಸಮಯದೊಂದಿಗೆ ಹೆಜ್ಜೆ ಹಾಕುತ್ತೇವೆ.

ನಮಗೆ ತುಂಬಾ ಅಗತ್ಯವಿರುವ ಸಮಯದಲ್ಲಿ ನಮ್ಮ ಜೊತೆಗಿದ್ದು ನಮ್ಮನ್ನು ಬಿಟ್ಟು ಕೊಡದ, ನಮ್ಮನ್ನು ಬಿಟ್ಟು ಹೋಗದ, ನಮ್ಮ ಸ್ನೇಹವನ್ನಲ್ಲದೆ ಬೇರೇನನ್ನೂ ಬಯಸದ ಸ್ನೇಹಿತರಿಗೆ ಈ ಒಂದು ದಿನವಷ್ಟೇ ಅಲ್ಲದೆ, ಪ್ರತಿದಿನ ಸಾವಿರ ಸಾವಿರ ಧನ್ಯವಾದಗಳನ್ನು ಹೇಳಲು ಬಯಸುವೆ.

ಫ್ರೆಂಡ್ಸ್,,,,,Happy Friendship Day.......

N....R....

Comments