ನಿತ್ಯಾಗ್ನಿಹೋಮ

ನಿತ್ಯಾಗ್ನಿಹೋಮ

ಬರಹ

ಹೋಮ ಧೂಮ
ನಿತ್ಯ ಸತ್ಯ
ಅಧ್ವರ್ಯುವಿಲ್ಲ
ಮಂತ್ರವಿಲ್ಲ ತಂತ್ರವಿಲ್ಲ
ನಡೆಯುತಿದೆ ನಿತ್ಯ
ತಲೆಗೊಂದರಂತೆ
ವಿಧಾತನಾರ್ಭಟಕೆ
ಭುಗಿಲೆದ್ದ ಅಗ್ನಿದೇವ
ತನ್ನದೇ ರಾಜ್ಯವೆಂಬಂತೆ
ಸುತ್ತುವರೆದ.
ಪ್ರಜೆ ದಿಕ್ಕಾಪಾಲು
ಆದರೂ ಅದರೊಳಗೆ
ನಡೆಯುತ್ತಾನೆ ಪ್ರಜೆ
ಧೂಪ ಧೂಮ
ತನ್ನದೇ ಎಂಬಂತೆ
ತನ್ನದೇ ಶೃಷ್ಟಿ
ಈ ಯಾಗ ಯಂತ್ರ
ಅದು ಅವನಿಗೂ ಗೊತ್ತು
ತನ್ನದೇ ಬಲೆಯೊಳಗೆ
ತಾನೆ ಸಿಕ್ಕಿ ಬಿದ್ದಿದ್ದಾನೆ
ಅಣು ಬಂಧಿಸಿ
ಅಗ್ನಿ ಸಂಧಿಸಿ
ಅಗ್ನಿದೇವ ವಿಜ್ರು೦ಭಿಸಿದ್ದಾನೆ
ನಿತ್ಯ, ಸತ್ಯ.

ಮುಂಬೈ ಮಾರಣ ಹೋಮ. ಮನುಷ್ಯನ ಕ್ರೌರ್ಯಕ್ಕೆ ಕೊನೆ ಎಲ್ಲಿ ತನ್ನಂತೆ ಎಲ್ಲರೂ ಎಂದರಿವಾಗುವ ತನಕ ಇದು ನಿಲ್ಲದು. ರಕ್ತ ಕುದ್ದು ಜ್ವಾಲಾಮುಖಿಯಾಗುವನಕ ನಡೆಸಲಿ .ತಾಳ್ಮೆಗೂ ಮಿತಿಯಿದೆ ಅತಿ ತಾಳ್ಮೆ ಬಲಹೀನತೆಯಾಗುವುದು.