ನಿತ್ಯಾನಂದರ ನಗು

ನಿತ್ಯಾನಂದರ ನಗು

ಬರಹ

  ಪೋಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗಲೂ ನಿತ್ಯಾನಂದರು ನಗುತ್ತಿದ್ದರು! ಏಕಿರಬಹುದು?
  ನಾನು ನಾಲ್ಕು ಕಾರಣಗಳನ್ನು ಊಹಿಸಿದ್ದೇನೆ:
  * ಅಣ್ಣಾವ್ರ ಜನ್ಮದಿನಕ್ಕೆ ಮೂರು ದಿನ ಮೊದಲಷ್ಟೇ ಬಂಧನಕ್ಕೊಳಗಾದ ನಿತ್ಯಾನಂದರಿಗೆ ಅಣ್ಣಾವ್ರ ಅಭಿನಯದ ಈ ಹಾಡು ನೆನಪಿಗೆ ಬಂದಿರಬಹುದು: ’ನಗುನಗುತಾ ನಲೀ ನಲೀ, ಏನೇ ಆಗಲೀ’.
  * ನಿತ್ಯಾನಂದ ಅಂತ ಹೆಸರಿಟ್ಟುಕೊಂಡಮೇಲೆ ಸದಾ(ನಂದ ಗೌಡರಹಾಗೆ) ನಗುತ್ತಲೇ ಇರಬೇಕಲ್ಲವೆ?
  * ತನ್ನ ಮುಖ ನೋಡಿದ ಭಕ್ತ-ಭಕ್ತೆಯರು, ’ಆ ಮೊಗವು, ಎಂಥಾ ಚೆಲುವು, ಮನವಾ ಸೆಳೆವಾ ಬಂಗಾರದ ಹೂವು’, ಎಂದು ಈಗಲೂ ಸಂಭ್ರಮಿಸುತ್ತಾರೆ/ಸಂಭ್ರಮಿಸಲಿ ಎಂಬ ಭ್ರಮೆ ಇರಬಹುದು.
  * ಅಂಥ ಅಬ್ದುಲ್ ಕರೀಮ್ ತೆಲಗಿಯೇ ಕ್ಯಾಮೆರಾಗಳೆದುರು ಯಾರಿಗೋ ವಿಷ್ ಮಾಡುವಂತೆ ನಟಿಸುತ್ತ ನಗುತ್ತ ಸಾಗುವಾಗ ತಾನೇಕೆ ಮುಗುಳ್ನಗೆ ನಗುತ್ತಿರಬಾರದು ಎಂಬ ಆಲೋಚನೆ ಇದ್ದೀತು.
  ನಾಲ್ಕೂ ಕಾರಣಗಳೂ ಓಕೆ. ನಿತ್ಯಾನಂದರು ನಗಬಾರದು ಯಾಕೆ?