ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ !
ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ
ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು. ಆರಂಭರಲ್ಲಿ ಘಟಕ ರಚನೆಗೆ ನಿರಾಸಕ್ತಿ ತೋರಿದರು. ವಸತಿ ನಿಲಯದ ವಿದ್ಯಾರ್ಥಿಗಳ ಸಮಸ್ಯೆ. ಸರಕಾರದ ನಿರ್ಲಕ್ಷ, ವಂಚನೆಯನ್ನು ಎಳೆ ಎಳೆಯಾಗಿ ವಿವರಿಸಾದಾಗ ಅವರ ಹೃದಯದಲ್ಲಿ ಅಡಗಿದ್ದ ನೋವು ಕಣ್ಣಿರಿನಲ್ಲಿ ಹೊರಬಿತ್ತು. "ಸಾರ್ ನೀವು ಹೇಳಿದ್ದು ಸತ್ಯವಾದ ಅಂಶಗಳು.ನಮ್ಗೆ ದಿನಾ ಅನ್ನ ಸಾಂಬರ ಮಾತ್ರ ಕೊಡ್ತಾರೆ. ತರಕಾರಿ ಊಟ ನಮ್ಗೆ ಗೊತ್ತೆ ಇಲ್ಲ.ಹುಳು ಹತ್ತಿರುವ ಕಾಳುಗಳನ್ನು ಬೇಯಿಸಿ ಕೊಡುತ್ತಾರೆ, ಚಿಕ್ಕ ರೂಮಿನಲ್ಲಿ 13 ಜನ ಇರ್ತೆವೆ. ಓದಿಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ವಿಟಾಮಿನ್ ಕೊರತೆಯಿರುವ ಕಾರಣ ಜಾಸ್ತಿ ಓದಿದ್ರೆ ಕಣ್ಣಲ್ಲಿ ನೀರು ಬರ್ತಿದೆ. ನೋಡಿ ಹಾಸ್ಟಲ್ ಗೆ ಬಂದ ಮೇಲೆನೆ ನನಗೆ ಸ್ಪೆಕ್ಟ್ ಬಂದದ್ದು ಎಂದು ಪದವಿ ವಿದ್ಯಾರ್ಥಿ ಹೇಳಿದಾಗ ಎಲ್ಲರು ಒಂದು ಕ್ಷಣ ಮೌನವಾಗಿ ಬಿಟ್ಟರು. ಕೊನೆಗೆ ಎಸ್.ಎಫ್.ಐ ಘಟಕ ರಚಿಸಲು ಒಪ್ಪಿಕೊಂಡು ಸಮಿತಿಯನ್ನು ಆಯ್ಕೆ ಮಾಡಿದರು. ಹೋರಾಟದ ಸಿದ್ದತೆಯು ಈಗ ಆರಂಭಗೊಂಡಿದೆ. ಇದು ಕರಾವಳಿ ಭಾಗದ ಹಾಸ್ಟಲ್ ದುಸ್ಥಿತಿ ಆದರೆ. ರಾಜ್ಯದಲ್ಲಿರುವ ಹಾಸ್ಟಲ್ ಗಳು ಗುಣಮಟ್ಟದ ಊಟವಿಲ್ಲದೆ ರೋಗಗ್ರಸ್ಥ ತಾಣಗಳಾಗುತ್ತಿವೆ ಎನ್ನುವುದಕ್ಕೆ ಸಾಕ್ಷಿಯಂತಿದೆ. ಮಾತೆತ್ತಿದರೆ ಬೊಗಳೆ ಬಿಡುವ ಇಲ್ಲಿಯ ಶಾಸಕರು, ಸಮಾಜ ಕಲ್ಯಾಣ ಸಚಿವರು ಎಚ್ಚತ್ತುಕೊಳ್ಳಬೇಕಿದೆ. ಗುಣಮಟ್ಟದ ಆಹಾರ ಮತ್ತು ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಮುಂದಾಗಬೇಕಿದೆ.