ನಿತ್ಯ ಪವಾಡಗಳು-ಝೆನ್ ಕಥೆ

ನಿತ್ಯ ಪವಾಡಗಳು-ಝೆನ್ ಕಥೆ

ಬರಹ

ಗುರುವಿನ ಪ್ರವಚನ ನಡೆದಿತ್ತು . ಬೇರೆ ಧರ್ಮದ ಪುರೋಹಿತನೊಬ್ಬ ನಡುವೆ ಬಾಯಿ ಹಾಕಿ ತನ್ನ ದರ್ಮಸಂಸ್ಥಾಪಕನ ಪವಾಡಗಳನ್ನು ಹೇಳಿ "ನೀವು ಅಂಥ ಪವಾಡ ಮಾಡಬಲ್ಲಿರ ?" ಎಂದು ಪ್ರಶ್ನಿಸಿದ.

ಗುರು ಶಾಂತವಾಗಿ ಉತ್ತರಿಸಿದ. - "ಇಲ್ಲಪ್ಪ ಅಂತ ದೊಡ್ಡ ದೊಡ್ಡ ಪವಾಡ ನನಗೆ ಸಾಧ್ಯವಿಲ್ಲ. ಕೆಲವು ಚಿಕ್ಕ ಚಿಕ್ಕ ಪವಾಡ ಮಾಡುತ್ತೇನೆ. ಉದಾಹರಣೆಗೆ ಹಸಿವೆಯಾದಾಗ ತಿಂದುಬಿಡುತ್ತೇನೆ; ನೀರಡಿಕೆಯಾದಾಗ ಕುಡಿದುಬಿಡುತ್ತೇನೆ; ಯಾರಾದರೂ ನನಗೆ ಅವಮಾನ ಮಾಡಿದರೆ ಅವರನ್ನು ಕ್ಷಮಿಸಿಬಿಡುತ್ತೇನೆ".