ನಿದ್ದೆಯಿಂದ ಎದ್ದ ತಕ್ಷಣ ಯಾರನ್ನು ಸ್ಮರಿಸಬೇಕು ?

ನಿದ್ದೆಯಿಂದ ಎದ್ದ ತಕ್ಷಣ ಯಾರನ್ನು ಸ್ಮರಿಸಬೇಕು ?

ಪ್ರತಿಯೊಬ್ಬರು ನಿದ್ರಾದೇವಿಯ ಕೃಪೆಯನ್ನು ಬೇಡಿಕೊಳ್ಳುವರೇ ಹೆಚ್ಚು. ನಿದ್ರೆ ಎಂಬುದು ಪ್ರತಿಯೊಬ್ಬರ ಜೀವನದ ದಿನಚರಿಯ ಪ್ರಾರಂಭಕ್ಕೆ ಮನಸ್ಸನ್ನು ತಿಳಿಗೊಳಿಸಿ ಪ್ರಶಾಂತತೆಯನ್ನು ಹೊಂದುವಂತೆ ಮಾಡುತ್ತದೆ ಸೂರ್ಯೋದಯಕ್ಕೆ 48 ನಿಮಿಷಗಳ ಕಾಲಗಳ ಮುಂದಿನ ಕಾಲವನ್ನು ಬ್ರಹ್ಮ ಮುಹೂರ್ತವೆಂದು ಹೇಳುವರು. ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯಿಂದ ಎದ್ದು ನಮ್ಮ ದಿನಚರಿಯನ್ನು ಪ್ರಾರಂಭಿಸಬೇಕು ಎಂದು ಹಿರಿಯರು ಹೇಳಿದ್ದಾರೆ. ಒಂದು ನಂಬಿಕೆಯ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ನಿದ್ದೆಯಲ್ಲಿ ಮುಳುಗಿದ್ದರೆ ನಮ್ಮ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ, ಅಲ್ಲದೆ ಬಡತನವನ್ನು ಆಹ್ವಾನಿಸುತ್ತದೆ ಎಂದು ಹಿರಿಯರು ಹೇಳಿದ್ದಾರೆ.

ಆದುದರಿಂದ ಬ್ರಹ್ಮ ಮುಹೂರ್ತದಲ್ಲಿ ಬಲಗಡೆಗೆ ತಿರುಗಿ ನಿದ್ದೆಯಿಂದ ಹೇಳಬೇಕು. ಹಠಾತ್ತಾಗಿ ನಿದ್ದೆಯಿಂದ ಎದ್ದು ನಿಲ್ಲಬಾರದು. ನಿದ್ದೆಯಿಂದ ಎದ್ದ ನಂತರ ಹಾಸಿಗೆ ಮೇಲೆ ಕುಳಿತು ತಲೆಯನ್ನು ನೇರವಾಗಿಟ್ಟುಕೊಂಡು ಪಾರ್ವತಿ, ಲಕ್ಷ್ಮಿ, ಸರಸ್ವತಿ, ಜನ್ನದೇವಿಯ ನಾಮವನ್ನು ಸ್ಮರಿಸಬೇಕು. ನಾವು ನಿದ್ದೆ ಮಾಡುತ್ತಿರುವಾಗ ರಕ್ತ ಪ್ರಸಾರವು ನಿಧಾನವಾಗಿ ಸಂಚರಿಸುತ್ತದೆ. ಒಂದೇ ಸಾರಿ ನಿದ್ದೆಯಿಂದ ಎದ್ದು ನಿಂತಾಗ ಹೃದಯ ತಕ್ಷಣವಾಗಿ ರಕ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುವುದಕ್ಕೆ ಒತ್ತಡ ಉಂಟಾಗುತ್ತದೆ. ಇದರಿಂದ ಹೃದಯ ಸ್ತಬ್ಧವಾಗುವ ಅವಕಾಶವು ಹೆಚ್ಚು.

ನಿದ್ದೆಯಿಂದ ಎಚ್ಚೆತ್ತ ನಂತರ ಸ್ವಲ್ಪ ಹೊತ್ತು ಹಾಗೆ ಹಾಸಿಗೆ ಮೇಲೆ ಕುಳಿತು ಭಗವಂತನ ನಾಮ ಸ್ಮರಣೆ ಮಾಡಿ ಪಾದವನ್ನು ಭೂಮಿಗೆ ಸ್ಪರ್ಶಿಸುವ ಮುನ್ನ ಭೂಮಾತೆಯನ್ನು ಕ್ಷಮಿಸು ಎಂದು ಕೇಳುತ್ತಾ ನೆಲವನ್ನು ಕೈಗಳಿಂದ ಮುಟ್ಟಿ ನಮಸ್ಕರಿಸಬೇಕೆಂದು ನಮ್ಮ ಹಿರಿಯರು ಹೇಳಿರುವುದನ್ನು ನೀವೆಲ್ಲರೂ ಕೇಳಿದ್ದೀರಿ. ಇದನ್ನು ವೈಜ್ಞಾನಿಕ ರೀತಿಯಲ್ಲಿ ಯೋಚಿಸಿದಾಗ ತಿಳಿಯುವುದೇನೆಂದರೆ ನಿದ್ರೆಯಲ್ಲಿರುವಾಗ ಶರೀರದಲ್ಲಿ ಸ್ಟ್ಯಾಟಿಕ್ ಎನರ್ಜಿ ಪ್ರಸರಿಸುತ್ತದೆ. ನಿದ್ದೆಯಿಂದ ಎಚ್ಚೆತ್ತು ಎದ್ದು ನಿಂತಾಗ ಆಸಕ್ತಿಯೇ ಡೈನಮಿಕ್ ಇಲ್ಲವೇ ಚಲನ ಶಕ್ತಿಯಾಗಿ ಬದಲಾಗುತ್ತದೆ. ಇದು ಶರೀರಕ್ಕೆ ಒಳ್ಳೆಯದಲ್ಲವಾದ್ದರಿಂದ ನಿದ್ದೆಯಿಂದ ಎಚ್ಚೆತ್ತು, ಹಾಸಿಗೆಯಿಂದ ಇಳಿಯುವಾಗ ಭೂಮಿಯನ್ನು ಕೈಗಳಿಂದ ಸ್ಪರ್ಶಿಸುವುದರಿಂದ ಶರೀರದಲ್ಲಿರುವ ಅಶುದ್ಧ ಶಕ್ತಿಯು ಕೈಗಳ ಮುಖಾಂತರ ಹೊರಗೆ ಹೋಗಿ ಸ್ವಚ್ಛವಾದ ಶಕ್ತಿಯ ಶರೀರದಲ್ಲಿ ಪ್ರಸರಿಸುತ್ತದೆ. ಈ ಅಭ್ಯಾಸವನ್ನು ಮೂಢನಂಬಿಕೆ ಎಂದು ಹೇಳುವವರೇ ಹೆಚ್ಚು ಆದರೆ ಹಿರಿಯರು ಹೇಳುವ ಪ್ರತಿಯೊಂದು ವಿಷಯದಲ್ಲಿ ಆಚಾರ ವಿಚಾರದಲ್ಲಿ ವೈಜ್ಞಾನಿಕ ವಿಚಾರವು ಅಡಗಿರುತ್ತದೆ.

(ಅಧಾರ) - ಸತೀಶ್ ಶೆಟ್ಟಿ ಚೇರ್ಕಾಡಿ 

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ