ನಿದ್ರಾದೇವಿಯೇ ಏನು ನಿನ್ನ ಲೀಲೆ.
ನಿದ್ರಾದೇವಿಯೆ, ಏನು ನಿನ್ನ ಲೀಲೆ...
ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ರಾದೇವಿಯ ಮಡಿಲಲ್ಲಿ ಕಳೆಯುತ್ತೇವೆ ಎಂದರೆ ಆಶ್ಚರ್ಯವಾದೀತೆ?
ಪ್ರತಿನಿತ್ಯ ನಾವು ಮಲಗಿ, ನಿದ್ರಿಸಿ, ಎದ್ದೇಳುತ್ತೇವೆ.
ಮಲಗಿರುವಾಗ ನಮ್ಮ ಮಿದುಳಿನಲ್ಲಾಗುವ ವ್ಯತ್ಯಾಸಗಳನ್ನನುಸರಿಸಿ, ನಿದ್ರೆಯನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ.
ಮೊದಲನೆಯ ಭಾಗವನ್ನು ಆರ್.ಇ.ಎಂ. ಎಂದರೆ (ರ್ಯಾಪಿಡ್ ಈ ಮೂವ್ ಮೆಂಟ್) ವೇಗವಾಗಿ ಕಣ್ಣುಗುಡ್ಡೆಗಳು ಚಲಿಸುವ, ಚುರುಕಾದ ನಿದ್ದೆ ಎನ್ನುತ್ತೇವೆ.
ಎರಡನೆಯ ಭಾಗವನ್ನು ಎನ್.ಆರ್.ಇ.ಎಂ. (ನ್ಯಾನ್ ರ್ಯಾಪಿಡ್ ಐ ಮೂವ್‍ಮೆಂಟ್) ನಿದ್ರೆ ಎಂದರೆ ಸದ್ದಿಲ್ಲದ ಕಣ್‍ಗುಡ್ಡೆ ಚಲನೆ ಇಲ್ಲದ ನಿದ್ರೆ ಎನ್ನುತ್ತೇವೆ.
ಎರಡನೇ ಭಾಗದ ನಿದ್ದೆಯನ್ನು ಮತ್ತೆ ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಪ್ರತಿ ಮನುಷ್ಯನು ನಿದ್ದೆ ಮಾಡುವ ಸಮಯ ಅಥವಾ ಎಷ್ಟು ಗಂಟೆ ನಿದ್ದೆ ಮಾಡುತ್ತಾನೆ ಎಂಬುದು ವೈಯಕ್ತಿಕ ವಿಷಯ.
ದಿನಕ್ಕೆ ಕನಿಷ್ಠ ಪಕ್ಷ ಆರು ಗಂಟೆಗಳ ನಿದ್ದೆ ಅವಶ್ಯಕ, ನವಜಾತ ಶಿಶುಗಳ ನಿದ್ರಾ ಸಮಯ ದಿನಕ್ಕೆ 6 ರಿಂದ 18 ಗಂಟೆಗಳು, ಮಗು ಬೆಳೆಯುತ್ತಾ ಹೋದಂತೆ ನಿದ್ದೆಯ ಸಮಯ ಕಡಿಮೆಯಾಗುತ್ತಾ ಹೋಗುವುದು.
ಹೆಚ್ಚಿನ ನಿದ್ದೆ ಮಾಡುವವರು :
ಇಂತಹವರು ಸುಮಾರು 9 ಗಂಟೆಗಿಂತಲು ಹೆಚ್ಚಿನ ಅವಧಿಯ ರಾತ್ರಿ ನಿದ್ದೆ ಮಾಡುವರು. ಇದರಿಂದ ಏನು ತೊಂದರೆಯಿಲ್ಲ.
ಕಡಿಮೆ ನಿದ್ದೆ ಮಾಡುವವರು :
ಇಂತಹವರು ಸುಮಾರು 6 ಗಂಟೆಗಿಂತಲೂ ಕಡಿಮೆ ಸಮಯ ರಾತ್ರಿ ನಿದ್ದೆಮಾಡುವರು. ಇಂತಹವರಲ್ಲೂ ಏನೂ ತೊಂದರೆ ಕಾಣದಿರಬಹುದು.
ನಿದ್ರೆ ಯಾಕೆ ಬೇಕು? ಎಂದು ಕೇಳಿದರೆ ನಿಖರವಾದ ಉತ್ತರವನ್ನು ನೀಡಲು ಕಷ್ಟ. ಎಷ್ಟೇ ಸಂಶೋಧನೆಗಳಾಗುತ್ತಿದ್ದರೂ ಸಹ ಈ ಪ್ರಶ್ನೆಗೆ ಉತ್ತರ ಕಷ್ಟ. ಸಂಶೋಧನೆಗಳ ಪ್ರಕಾರ 7 ರಿಂದ 9 ಗಂಟೆಗಳ ನಿದ್ರೆ ಮಾಡುವವರಿಗೆ ಖಾಯಿಲೆಗಳು ಕಡಿಮೆಯಂತೆ, ನಿದ್ರಾ ಸಮಯದಲ್ಲಿ ದೇಹದಲ್ಲಿನ ಕಾರ್ಯ ಚಟುವಟಿಕೆಗಳೆಲ್ಲಾ ಕಡಿಮೆಯಾಗುವುದರಿಂದ ಶಕ್ತಿ ವ್ಯಯ ಕಡಿಮೆಯಾಗುವುದು. ಶಕ್ತಿಯು ದೇಹದಲ್ಲಿಯೇ ಉಳಿಯುವುದು, ಮಿದುಳು ಹಾಗೂ ಉಳಿತಾಯದ ದೈಹಿಕ ಶಕ್ತಿಯ ಚಿತೋಹಾರಿ ಈ ನಿದ್ರೆಯೆಂಬ ಕ್ರಿಯೆ.
ಇಂಥಹ ಅತ್ಯವಶ್ಯಕ ನಿದ್ರೆಗೆ ಹಲವಾರು ರೀತಿಯ ಭಂಗಗಳುಂಟು.
ನಿದ್ರೆ ಬಾರದಿರುವುದು ಅನೇಕರ ಸಮಸ್ಯೆಯಾಡರೆ, ಅತಿಯಾದ ನಿದ್ರೆ, ನಿದ್ರೆಯಲ್ಲಿ ಆಗುವ ತೊಂದರೆಗಳು ಹಲವರ ಸಮಸ್ಯೆ.
ಅತಿಯಾದ ನಿದ್ರೆ (ಹೈಪರ್ ಸಾಮ್ನಿಯ) :
ಹಗಲು ಹೊತ್ತಿನಲ್ಲಿ ಬಹಳ ನಿದ್ರಿಸುವ, ಎಲ್ಲೆಂದರಲ್ಲಿ ತೂಕಡಿಸುವ ಅನೇಕರನ್ನು ನೋಡುತ್ತೇವೆ. ತಿಳಿಯದೆಯೇ ಕುಳಿತಲ್ಲಿಯೇ ನಿದ್ರೆಗೆ ಜಾರುವರು. ಇಂತಹವರನ್ನು ಎಚ್ಚರಿಸಲು ಕೆಲವೊಮ್ಮೆ ಬಹಳ ಹೊತ್ತು ಹಿಡಿಯುವುದು. ಇಲ್ಲದಿದ್ದರೆ ಎದ್ದನಂತರ ಕೆಲವರು ಆಕ್ಷಣದಲ್ಲಿ ಎಲ್ಲಿದ್ದೇವೆ, ಏನಾಗುತ್ತಿದೆ ಎಂಬ ಪರಿವೆಯೇ ಇಲ್ಲದಂತಿರುವರು.
ನೂರು ಜನರಲ್ಲಿ ಒಂದಿಬ್ಬರಿಗೆ ಈ ರೀತಿಯ ಅತಿಯಾದ ನಿದ್ರೆಯ ತೊಂದರೆ, ಇದರಿಂದ ಸಾಮಾಜಿಕ ಹಾಗೂ ವೃತ್ತಿಗೆ ಸಂಬಂಧಪಟ್ಟ ತೊಂದರೆಗಳನ್ನು ಇವರು ಎದುರಿಸುವರು.
ಇಂಥಹ ಅತಿಯಾದ ನಿದ್ರೆಗೆ ಹಲವಾರು ಕಾರಣಗಳಿರಬಹುದು.
ನಾರ್ ಕೊಲೆಪ್ಸಿ : 15 ರಿಂದ 25 ವರ್ಷ ವಯಸ್ಸಿನವರಲ್ಲಿ ಸಾಮಾನ್ಯ ಕಣ್ಣೆಳೆದು ಕೊಂಡು ನಿದ್ರಾದೇವಿಯ ಮಡಿಲಿಗೆ ‘ಸ್ವಲ್ಪ ಹೊತ್ತು’ ಶೇರಿ ನಂತರ ಉಲ್ಲಸಿತರಾಗಿ ಏಳುತ್ತಾರೆ. ಈ ರೀತಿ ಆದ ನಂತರ ಮತ್ತೊಂದು ಈ ರೀತಿಯ ನಿದ್ರೆ ಆವರಿಸಲು 2 ರಿಂದ 3 ಗಂಟೆ ಅಂತರ ಬೇಕಾಗಬಹುದು.
ಮನುಷ್ಯ ಎಚ್ಚರಿದಿಂದಿದ್ದರೂ ಕೆಲವೊಮ್ಮೆ ಕೈ ಕಾಲುಗಳ ಸ್ನಾಯುಗಳು ಸೋತಂತಾಗಿರುವುವು, ಇಂಥಹ ನಿದ್ದೆಯಿಂದೆದ್ದ ಕೆಲವರಿಗೆ ಅವರ ಕೈಕಾಲುಗಳು ಆಡದೇ ಇದರಂತಾದ ಅನುಭವ ಇದು ತಾತ್ಕಾಲಿಕ.
ನಿದ್ದೆಯಲ್ಲಿ ಥಟ್ ಎಂದು ಉಸಿರು ಕಟ್ಟಿದ ಅನುಭವ, ಮುಟ್ಟಿನ ತೊಂದರೆಗಳು, ತಲೆಗೆ ಪೆಟ್ಟು, ಮದ್ಯಪಾನ, ಮಿದುಳಿನ ಸೋಂಕು, ಟ್ರಿಪನಸೋಮಿಯಾಸಿನ್ ಎಂಬ ಪರಾವಲಂಬಿ ಕಾಯಿಲೆ, ಹಲವಾರು ಔಷಧಗಳ ಸೇವನೆ, ಖಿನ್ನತೆ, ಮಾನಸಿಕ ತೊಂದರೆ ಮುಂತಾದವೇ ಅತಿಯಾದ್ ನಿದ್ರೆಗೆ ಕಾರಣ.
ಅನೇಕರಲ್ಲಿ ಈ ಸಮಸ್ಯೆಗೆ ನಿಖರವಾದ ಕಾರಣವೇ ಇರುವುದಿಲ್ಲ.
ಅತೀ ಸ್ಥೂಲಕಾಯದವರಲ್ಲನೇಕರಲ್ಲಿ ಬೆಳಕಿನ ನಿದ್ದೆ ತಡೆ ಹಿಡಿಯಲಾಗುವುದಿಲ್ಲ. ರಾತ್ರಿಯ ವೇಳೆ ನಿದ್ರಿಸುವಾಗ ಇಂಥಹವರು ಜೋರಾಗಿ ಗೊರಕೆ ಹೊಡೆಯುವುದು, ನಿದ್ದೆಯಲ್ಲಿ ಅನೇಕ ಸಲ ಉಸಿರು ಕಟ್ಟಿದಂತಾಗುವ ತೊಂದರೆಯಿರುವುದು.
ಚಿಕಿತ್ಸೆ :
ಅತಿಯಾದ ನಿದ್ರೆಗೆ ಕಾರಣ ತಿಳಿಯುವುದು ಅವಶ್ಯಕ. ಮದ್ಯಪಾನಕ್ಕೆ ವಿದಾಯ ಹೇಳುವುದು, ಖಿನ್ನತೆಯಿಂದ ದೂರವಿಡಲು ಕ್ರಮಗಳನ್ನು ಪಾಲಿಸುವುದು.
ನಿಯಮಿತ ವ್ಯಾಯಾಮ, ನಡಿಗೆ, ದೇಹದ ಅತಿಯಾದ ಕೊಬ್ಬನ್ನು ಕರಗಿಸುವುದು. ಕಾಫಿಯಂತಹ ಕೆಫೀನ್ ಅಂಶಉಳ್ಳ ಪಾನೀಯ ಸೇವನೆಯಿಂದ ಮೆದುಳನ್ನು ಉತ್ತೇಜಿಸುವುದು. ಗೊರಕೆಗೆ ಕಾರಣ ಕಂಡು ಹಿಡಿದು ಸರಿಯಾದ ಚಿಕಿತ್ಸೆ ಕೊಡುವುದು.
ಮಲಗಿ ಏಳುವ ಕ್ರಿಯೆಯ ತೊಂದರೆ :
ಯಾವಾಗ ಬೇಕೋ ಆಗ ಮಲಗಲಾಗದಿರುವಿಕೆ, ದೈನಂದಿನ ನಿದ್ರೆ ಹಾಗೂ ಎಚ್ಚರಗೊಳ್ಳುವ ಚಕ್ರದಲ್ಲಿ ಏರುಪೇರಾದಾಗ ಈ ತೊಂದರೆ ಕಾಣುವುದು. ಇತರೇ ವೇಳೆಯಲ್ಲಿ ಸಾಕಷ್ಟು ನಿದ್ರಿಸಬಹುದಾದರೂ ಸಹ ಬೇಕೆನಿಸಿದಾಗ ನಿದ್ರೆ ಬರುವುದಿಲ್ಲ.
ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಂತರ (ಜೆಟ್ ಲ್ಯಾಗ್) ಹಾಗೂ ಶಿಫ್ಟ್ ಡ್ಯೂಟಿ ಮಾಡುವವರಲ್ಲಿ ಇದು ಸಾಮಾನ್ಯ. ಕೆಲವರಿಗಂತೂ ಬೇಗ ಮಲಗಲು ಸಾಧ್ಯವೇ ಇಲ್ಲ. ರಾತ್ರಿ ಲೇಟ್ ಆಗಿ ಮಲಗಿ, ಮತ್ತೆ ಬೆಳಗ್ಗೆ ತಡವಾಗಿ ಏಳುವರು ‘ಗೂಬೆ’ಯ ಜಾತಿಯವರು ಎಂದು ಇವರಿಗನ್ನುವರು, ಮತ್ತೆ ಕೆಲವರಿಗೆ ರಾತ್ರಿ ಎದ್ದಿರಲು ಸಾಧ್ಯವೇ ಇಲ್ಲ. ಬೇಗ ಮಲಗಿ ಬೆಳಗಿನ ಜಾವ ಬೇಗ ಏಳುವವರಿವರು, ಇವರನ್ನು ‘ಲಾರ್ಕ್ಸ್’ ಎನ್ನುವರು. ಇಂಥವರಿಗೆ ಔಷಧೀಯ ಚಿಕಿತ್ಸೆ ಅವಶ್ಯವಿಲ್ಲ. ಮನೆಯಿಂದಾಚೆ ಇದ್ದು ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದು, ಸ್ಥಳೀಯ ಕಾಲ ಮಾನಕ್ಕೆ ಹೊಂದಿಕೊಳ್ಳುವುದು ಮುಖ್ಯ.
ನಿದ್ರೆಯ ಎರಡನೇ ಭಾಗದಲ್ಲಿ, ಅದರಲ್ಲೂ 4ನೇ ಹಂತದಲ್ಲಿರುವಾಗ ಅನೇಕ ತೊಂದರೆಗಳು ಸಾಮಾನ್ಯ.
ಹುಡುಗಿಯೊಬ್ಬಳು ರಾತ್ರಿ ವೇಳೆ ತನಗರಿವಿಲ್ಲದಂತೆಯೇ ಎದ್ದು ಮನೆಯ ಬಾಗಿಲನ್ನು ತೆರೆದು, ಬೀದಿಯಲ್ಲಿ ನಡೆದು ಎಲ್ಲಿಗೋ ಹೊರಡಲನುವಾಗಿದ್ದನ್ನು ಕಂಡ ಮನೆಯವರಿಗೆ ಗಾಬರಿ! ಈ ರೀತಿ ‘ನಿದ್ರಾನಡಿಗೆ’ ಅನೇಕರಲ್ಲಿ ಸಾಮಾನ್ಯ. ಮನೆಯಲ್ಲೆಲ್ಲಾ ಓಡಾಡುವುದು, ಮನೆಯ ಹೊರಗೆ ಹೋಗುವುದು, ಮಲಗಿರುವ ಕಡೆಯಿಂದ ಬೇರೆಡೆಗೆ ಹೋಗುವುದು, ಇಂಥವರಲ್ಲಿ ಸಾಮಾನ್ಯ. ಮನೋರೋಗ ತಜ್ಞರ ಸಲಹೆಗೆ ಹಾಗೂ ಔಷಧಿ ಸೇವನೆಯಿಂದ ಇದನ್ನು ಹೋಗಲಾಡಿಸಬಹುದು.
ನಿದ್ರೆ ಮಾಡುತ್ತಿದ್ದಂತೆ ಕೆಲವರು ಕಿಟಾರ್ ಎಂದು ಕಿರುಚಿ ಎದ್ದು ಕುಳಿತು ಕೊಳ್ಳುವರು, ಎದೆಯ ತೀವ್ರವಾದ ಬಡಿತ, ಬೆವರು ಸುರಿಸುವಿಕೆ ವೇಗದ ಉಸಿರಾಟವನ್ನು ಇಂಥಹವರಲ್ಲಿ ಕಾಣುತ್ತೇವೆ.
ಎಚ್ಚರಗೊಂಡ ಇಂಥಹವರು ಏನಾಯಿತೆಂಬುದನ್ನು ನೆನಪಿನಲ್ಲಿಡಲೂಬಹುದು, ಮರೆಯಲೂಬಹುದು.
ನಿದ್ರೆಯಲ್ಲಿ ಮಗು ಕಟಕಟ ಹಲ್ಲು ಕಡಿಯುತ್ತದೆ ಎಂಬುದು ಅನೇಕ ತಾಯಂದಿರ ಮುಂದಿರುವ ಸಮಸ್ಯೆ, ಹೊಟ್ಟೆಯಲ್ಲಿ ಜಂತುವಿರುವುದರಿಂದಲೇ ಈ ರೀತಿ ಎಂಬುದು ಅವರ ವಾದ. ಇದು ತಪ್ಪು ಕಲ್ಪನೆ ಮಕ್ಕಳಿಗೆ ಈ ರೀತಿ ಹಲ್ಲು ಕಡಿಯುವುದರ ಬಗ್ಗೆ ಪರಿವೆ, ಅರಿವು ಇರುವುದೇ ಇಲ್ಲ.
ನಿದ್ರೆಯಲ್ಲಿ ಮಾತು:
ನಿದ್ರೆ ಮಾಡುತ್ತಾ ಗಟ್ಟಿಯಾಗಿ ಮಾತನಾಡುವುದು, ಕೆಲವರು ಪಾಠ ಮಾಡುವುದು, ತಮಗಾಗದವರನ್ನು ಬೈಯುವುದನ್ನು ಕಂಡಿದ್ದೇನೆ. ಬೆಳಗ್ಗೆ ಎದ್ದನಂತರ ಅವರು ಏನು ಮಾತಾಡಿದರು ಅಂತ. ಗೊತ್ತಿರುವುದೇ ಇಲ್ಲ.
ಕೆಟ್ಟಕನಸು :
(ನೈಟ್ ಮೇರ್) ನಿದ್ದೆಯ ಕಡೇ ಭಾಗದಲ್ಲಿರುವಾಗ ಅತೀ ಭಯಂಕರವಾದ ಹೆದರಿಕೆಯ ಕೆಟ್ಟ ಕನಸುಗಳು ಬೀಳುವುವು. ಭಯದಿಂದೆದ್ದ ಜನರು ಹೆದರಿಕೆಯಿಂದ ಕೂಡಿದ್ದರೂ ಸಹ ಕನಸನ್ನು ಚೆನ್ನಾಗಿ ನೆನಪಿಡಬಲ್ಲರು.
ನಿದ್ರೆಯಲ್ಲಾಗುವ ಇತರೇ ತೊಂದರೆಗಳೆಂದರೆ ರಾತ್ರಿಯ ವೇಳೆ ಎದೆನೋವು ಅಸ್ತಮ, ಫಿಟ್ಸ್ ಬರುವುದು, ತಲೆತಲೆ ಚಚ್ಚಿಕೊಳ್ಳುವುದು ಇವೂ ಅನೇಕ ತೊಂದರೆಗಳು.
ಚಿಕಿತ್ಸೆ :
ಎಲ್ಲ ಹಾಗೂ ಮಾನಸಿಕ ವೈದ್ಯರ ಸಹಾಯದಿಂದ ಈ ತೊಂದರೆಗಳನ್ನು ಹೊಡೆದೊಡಿಸಬಹುದು.
ನಿದ್ದೆ ಮಾಡುವಾಗ ಅನುಸರಿಸಬೇಕಾದ ಅಂಶಗಳು :
ದಿನ ನಿತ್ಯ ನಿಗದಿತ ವೇಳೆಯ ವ್ಯಾಯಾಮದಿಂದ ನಿದ್ದೆಗೆ ಅನುಕೂಲಕರ.
ಹಗಲಿನ ವೇಳೆಯಲ್ಲಿ ತೂಕಡಿಸುವುದು, ಮಲಗುವುದನ್ನು ತಡೆದರೆ ರಾತ್ರಿನಿದ್ದೆ ಸರಿಯಾಗುವುದು.
ಮಲಗುವ ಮುಂಚೆ ಹೆಚ್ಚಿನ ನೀರಿನ ಆಹಾರವನ್ನು ಸೇವಿಸದಿರಿ.
ಮಲಗುವ ಮುಂಚೆ ಕಾಫಿ, ಟೀ ಮುಂತಾದವುಗಳನ್ನು ಸೇವಿಸಿದರೆ ನಿದ್ರೆ ಬಾರದು.
ಮಲಗಿ ಪುಸ್ತಕ ಓದುವುದು, ಟಿ.ವಿ ನೋಡುವುದನ್ನು ನಿಲ್ಲಿಸಿರಿ
ದಿನನಿತ್ಯ ಮಲಗುವ ಹಾಗೂ ಏಳುವ ಸಮಯವನ್ನು ಸರಿಯಾಗಿ ಪಾಲಿಸಿರಿ.
ಮಲಗುವ ಕೋಣೆ, ಹಾಸಿಗೆಯ ಮೇಲೆ ಇತರೇ ಚಟುವಟಿಕೆಗಳು (ತಿನ್ನುವುದು, ಓದುವುದು, ಆಡುವುದು)ಬೇಡ.
ನಿದ್ರೆಯಲ್ಲಿ ಯಾವುದೇ ತೊಂದರೆಗಳು ದುಃಸ್ವಪ್ನಗಳು ಬೀಳದಂತೆ ಅನೇಕರು ದೇವರಿಗೆ ಕೈ ಮುಗಿದು ರಾಮಂ, ಸ್ಕಂದಂ, ಹನುಮಂತಂ... ಎಂದು ಪ್ರಾರ್ಥಿಸುವ ಕ್ರಮ ಇಂದಿಗೂ ನಡೆದು ಬಂದಿದೆ!
Comments
"ಅತಿಯಾದ ನಿದ್ರೆ (ಹೈಪರ್ ಸಾಮ್ನಿಯ