ನಿದ್ರೆ ಇಲ್ಲಾ ಮಾರಾಯ !
'ಸೌಖ್ಯವೇ'? ಎಂದು ಕೇಳಿದ್ದಕ್ಕೆ ನನ್ನ ಮಿತ್ರ ಬಂಗೇರ ಕೊಟ್ಟ ಉತ್ತರ. ಕೊಲೆ, ಸುಲುಗೆ ಎಲ್ಲಾ ಐ.ಟಿ. ಉದ್ಯಮ ದಲ್ಲಿ ಕೆಲಸಮಾದುವ ಇಂಜಿನಿಯರ್ ಗಳಮೇಲೆ ! ಇದು ಈ ವರ್ಷದ ಜನವರಿಯಿಂದ ಪ್ರತಿನಿತ್ಯದ ಸುದ್ದಿ ! ಬಂಗೇರರ ಇಬ್ಬರು ಪುತ್ರರೂ ಐ.ಟಿ.ಕಂಪೆನಿ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಧ್ರುತಿಗೆಡುವುದು ನ್ಯಾಯ ತಾನೇ ?
ನೋಡಿ, ವರ್ಶದ ಶುರುವಿನಿಂದ ಎಷ್ಟು ಕೊಲೆ ರಾಬರಿ ಗಳ ವರದಿಯಾಗಿದೆ !
1. ಪುಣೆಯ 'ಇನ್ಫೋಸಿಸ್' ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್, ವಿಕ್ರಮ್
ಪೊದ್ದಾರ್ ನ ಬರ್ಬರ ಕೊಲೆ.
2. ಕಾಲ್ಸೆಂಟರ್ ನಲ್ಲಿ ಕೆಲಸಮಾಡುವ ಹುಡುಗಿಯ ರೇಪ್ ಹಾಗೂ ಕೊಲೆ.
3. ಬೆಂಗಳೂರಿನ 'ಒರೆಕಲ್' ಸಂಸ್ಠೆಯ ಭಾಸ್ಕರ್ ರೈ ಮೇಲೆ ಧಾಳಿ
ಗುಂಡು ಹಾರಿಸಿ ಗಾಯಗೊಳಿಸಿದ್ದು.
4. ಮುಂಬೈ ನ ಮಲಾಡ್ ನಿವಾಸಿ ಸಂಜಯ್ ಬಕ್ತ್ಸಲ್ ಮೇಲೆ ಹಲ್ಲೆ,
ಮತ್ತು ಹಣ ಅಪಹರಣ.
5. ಪುಣೆಯ ಇಂಜಿನಿಯರ್ (ಸೈಬೇಜ್ ಸಾಫ್ಟ್ ವೆಯರ್),ಪೀಯುಷ್ ಶರ್ಮ
ಕಾಣೆಯಾಗಿದ್ದಾನೆ)( 22 ನೇ ತಾ.ಟೈಂಸ್ ಆಫ್ ಇಂಡಿಯ ವರದಿ)
ಎಮ್.ಎನ್.ಸಿ/ಭಾರತದ ಕೆಲವು ಭಾರಿ ಸಂಸ್ಥೆ ಗಳು ಕೊಡುವ ಭಾರಿ ಸಂಬಳ,ಸ್ವಾತಂತ್ರ್ಯ ಕೆಲಸಪ್ರಾಣಾಳಿ, ಸೌಲಭ್ಯಗಳು ಕೆಲವು ಬಿಸಿರಕ್ತದ ಯುವಕರ ತಲೆಕೆಡೆಸಿವೆ. ದುಶ್ಕರ್ಮಿಗಳು ಇದರ ಫಾಯಿದೆ ಪಡೆದಿದ್ದಾರೆ, ಅಲ್ಲವೇ ? ನೀವೇ ಹೇಳಿ ?
ವೆಂ.