ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ
ಬರಹ
ಬಿಸಿಲ ಬೇಗೆಯಲಿ ತಂಗಾಳಿಯ ಒಂದು ಅಲೆ ಬಂದು ನನ್ನ ಚುಂಬಿಸಿ ಮರೆಯಾಯಿತು
ತಂಗಾಳಿಯಂತ ಹೆಣ್ಣೆ ನಿನ್ನಿಂದ ಹೃದಯದಲ್ಲಿ ಪ್ರೇಮಜ್ವಾಲೆ
ಈ ಜ್ವಾಲೆ ಶಮನ ನಿನ್ನ ಪ್ರೀತಿಯಿಂದ ನಂದಿಸು ಬಾರೆ ಅಮೄತ ಧಾರೆ !
ಓ ನನ್ನ ಕನಸಿನ ರಾಜಕುಮಾರಿ, ಓ ನನ್ನ ಕನಸಿನ ರಾಜಕುಮಾರಿ
ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ !!
ಕಣ್ಣೋಟದಿಂದ ನೀನು ಹೇಳಿದ್ದು ಏನು ನಲ್ಲೆ
ಆಗಿಂದ ಈ ಹೃದಯ ಹೇಳ್ತಿದೆ ಕೇಳು ನೀನಿರದ ಸ್ವರ್ಗಾನು ಒಲ್ಲೆ !!
ನೋಡಿದ ಮೇಲೆ ನಿನ್ನಾ ಜಗವಷ್ಟು ಸುಂದರ ಅನಿಸೋದೆ ಇಲ್ಲ
ಕಂಗಳ ತುಂಬೆಲ್ಲ ನೀನೆ ಬೇರೆನು ಕಾಣೋದೆ ಇಲ್ಲ !!
ಚಂಚಲ ಮನಸ್ಸಿದು ಒಂದೆಡೆ ನಿಲ್ಲದು
ಪ್ರೀತೀಯ ಕಡಿವಾಣ ಹಾಕು..
ನಿಂತಿದೆ ಜೀವನ ನಿನಗಾಗಿ ಕಾದು
ಬದುಕಿಗೆ ನೀ ಬೇಕೆ ಬೇಕು !!
ನಿನ್ನ ನಾ ಪ್ರೀತಿಸುವೆ ಪ್ರೀತಿಗಾಗಿ ಜೀವಿಸುವೆ ಬಾ ನನ್ನ ಕನಸಿನ ರಾಜಕುಮಾರಿ !!