ನಿನಗೋಸ್ಕರ ಸಾಯೋನು, ನಿನಗೋಸ್ಕರ ಬದುಕ್ತಿದೀನಿ…

ನಿನಗೋಸ್ಕರ ಸಾಯೋನು, ನಿನಗೋಸ್ಕರ ಬದುಕ್ತಿದೀನಿ…

ಬರಹ

ಪಾಪಿ ಏನಾದ್ರು ಅನ್ಕೊಂಡಾಗ ಏನೂ ಆಗಲ್ಲ, ಯಾವಾಗ ಏನಾಗಬಾರದು ಅನ್ಕೊತಾನೋ ಅವಾಗ ವಿಧಿ ಉಲ್ಟಾ ಹೊಡಿಯುತ್ತೆ… ಹಂಗೆ ಆಗಿದೆ ನನ್ನ ಪರಿಸ್ಥಿತಿ ಈಗ…ನಿನ್ನ ನೆನಪು ನನ್ನ ಕಿತ್ತು ತಿಂತಾ ಇದ್ದಾಗ ಈ ಜೀವನ, ಜನ್ಮ ಬೇಡ ಅನಿಸಿಬಿಟ್ಟಿತ್ತು… ಆಗ ನಾನೇ ಈ ಲೋಕ ಬಿಟ್ಟು ಹೋಗೋ ಮನಸು ಮಾಡಿ ಎರಡು ಸಲ ಪ್ರಯತ್ನ ಪಟ್ಟಿದ್ದೆ… ಆದ್ರೆ ಆಗ ನನ್ನ ಗ್ರಹಚಾರಕ್ಕೆ ಅದೂ ಸಾಧ್ಯ ಆಗಿರಲಿಲ್ಲ… ಆದ್ರೆ ಈಗ ಇನ್ನು ಬದುಕಬೇಕು, ಬದುಕಿ ಏನಾದ್ರು ಸಾಧಿಸಬೇಕು, ಸಾಧಿಸಿ ನಿನ್ನನ್ನ ನನ್ನವಳನ್ನಾಗಿ ಮಾಡ್ಕೋಬೇಕು ಅನ್ಕೊಂಡಾಗ ಆ ಸಾವು ನನ್ನ ಬೆನ್ನು ಹತ್ತಿದೆ… ಎರಡನೇ ಸಲ ನಿನ್ನ ಬಿಟ್ಟು ಹೋಗೋ ಪ್ರಯತ್ನ ಮಾಡಿದಾಗ ಏನೂ ಸಿಗದ ಟೈಮ್ ನಲ್ಲಿ ಕೊಕ್ ಬಾಟಲಿಗೆ 2 ಪ್ಯಾಕ್ DDT ಹಾಕಿ ಕುಡಿದಿದ್ದೆ… ಆಗ ಸಾಯಬೇಕು ಅನ್ಕೊಂದ್ರು ನಾನು ಸತ್ತಿರಲಿಲ್ಲ… ಆ ವಿಷಾನು duplicate ಅನ್ಕೊಂಡು ಸುಮ್ನಾಗಿದ್ದೆ… ಆದ್ರೆ ಈಗ ಅದು ನನ್ನ ತಿನ್ನೋಕೆ ಶುರು ಮಾಡಿದೆ… ಆ ವಿಷ ನನ್ನ ಕರಳು ಸುಟ್ಟುಹಾಕೋ ಹೊಂಚು ಹಾಕಿ ಕೂತಿದೆ… ಈಗಾಗ್ಲೇ 7-8 ಸಲ blood omit ಮಾಡಿದ್ದಾಯ್ತು… ಡಾಕ್ಟರ್ treatment ತಗೊಳೋಕೆ ಹೇಳಿದಾರೆ… ಸ್ವಲ್ಪ ದುಡ್ಡು ಖರ್ಚಾಗುತ್ತೆ ಬಟ್ comlete ಆಗಿ poison ತೆಗೀತಾರಂತೆ… ಆಮೇಲೆ ನಂಗೆ ಏನೂ ಆಗಲ್ವಂತೆ… ಮೊನ್ನೆ ಮತ್ತೊಮ್ಮೆ ಕೆಟ್ಟ ನಿರ್ಧಾರ ಮಾಡಿದ್ದೆ… ಆದ್ರೆ ಆ ನಿರ್ಧಾರ ಮಾಡಿಬಿಟ್ರೆ ನೀನು ನಂಗೆ ಸಿಗೋಲ್ಲ ಅಂತ ನಂಗ್ ಗೊತ್ತು …so, ಈಗ ಕಂಪ್ಲೀಟ್ ಡಾಕ್ಟರ್ ಹೇಳಿದ ಹಾಗೆ ಕೇಳೋದು.. ಮತ್ತೆ ಮೊದಲಿನ ಕೀರ್ತಿ ಆಗಿ ನಿನ್ನ ಸ್ಟುಪಿಡ್ ಆಗಿ ಉಳ್ಕೊಳೋದು…

ನಾನು ಹೇಗಾದರೂ ಬದುಕಿ ಬಿಟ್ಟೇನು, ಆದ್ರೆ ನಿನ್ನ ಹೊರತು ನನ್ನ ಜೀವನ ಇಲ್ವೋ… ಅವತ್ತು ನಿನಗೊಸ್ಕರವೇ ಸಾಯೋಕೆ ಹೊರಟಿದ್ದೆ… ಇವತ್ತು ನಿನಗೊಸ್ಕರವೇ ಬದುಕ್ತಿದೀನಿ… ನನ್ನ ಜೀವನದ ಗುರಿ ಒಂದೇ.. ನಂಗೆ ನೀನ್ ಬೇಕು ಅಷ್ಟೆ…

ಆದ್ರೆ ಎಲ್ಲವೂ ಸರಿಹೋಯ್ತು ಅಂತ ನಾನಂದುಕೊಂಡು ನಿನ್ನ ಒಪ್ಪಿಗೆ ಕೇಳೋಕೆ ಬರ್ತೀನಲ್ಲ ಅವತ್ತು ಮಾತ್ರ `ನೋ, ನೀನಂದ್ರೆ ನಂಗಿಷ್ಟ ಇಲ್ಲ, ನಂಗೆ ನೀನು ಬೇಡ’ ಅಂದುಬಿಡಬೇಡ… ಅವತ್ತು ನಾನೇ ಬದುಕಬೇಕು ಅಂದುಕೊಂಡ್ರೂ ನನ್ನ ಹೃದಯಾನೆ ಆತ್ಮಹತ್ಯೆ ಮಾಡ್ಕೊಂಡು ಬಿಡುತ್ತೆ… ಪ್ಲೀಸ್ ಹಂಗಾಗೋಕೆ ಬಿಡಬೇಡ.. ಪ್ಲೀಸ್…

www.neenillade.wordpress.com