ನಿನ್ನಂಥ ರಂಗದೊಳು
ಕವನ
ನಿನ್ನಂಥ ರಂಗದೊಳು
ಮೌನ ಯಾಕೆಲೆ ಒಲವೆ
ನಾನಿಲ್ಲವೇನೇ ನಿನ್ನ ಮಗುವೆ
ಕಳೆದ ನೋವುಗಳೆಲ್ಲ
ನನ್ನಲ್ಲೂ ಇಹುದಲ್ಲೆ
ಸಂಜೆಗತ್ತಲೆ ನಡುವೆ ಯಾಕೆ ಅಳುವೆ
ಸಖನಾಗಿ ಸವಿಯಾಗಿ
ನಿನ್ನ ತೋಳಲೆ ಮಲಗೆ
ಹರುಷ ಹೊನಲಿತ್ತು ನಮ್ಮ ಜೊತೆಗೆ
ಇಂದು ಏತಕೆ ಹೀಗೆ
ಮೌನ ತೊರೆಯಾಗಿರುವೆ
ಬಾಳ ಕನಸಿನಲಿ ಮುರುಟಿ ಮಲಗೆ
ಮಾತು ಮಾತಿನ ನಡುವೆ
ಗುಡುಗಾಟ ಹುಡುಕಾಟ
ಹುಚ್ಚಾದ ಮನವನ್ನು ಸಂತೈಸುವೆ
ಕಾಲ ಕಾಲದ ಎಡೆಯೆ
ಮೌನ ಮುಸುಕಿನ ಆಟ
ಹೃದಯವ ಹಿಂಡಿದಾ ನೋವಲ್ಲಿಹೆ
ನಿನ್ನ ಚಿಂತೆಯೊಳಿಂದು
ನನ್ನ ವೇದನೆ ನೂರು
ಎಲ್ಲು ಹರುಷವು ಇಲ್ಲ ಸೋಲಾದರೆ
ಬೇಡವೆನ್ನುವೆ ಮೌನ
ನಗು ನಗುತ ಬಾಳುತಿರೆ
ಕಷ್ಟ ಸುಖವೆಂದೂ ಸಹ ಬಾಳುವೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
