ನಿನ್ನಿಷ್ಟದ ದುರುಳ
ಕವನ
ಏ ಹುಡುಗಿ
ನೀ ಎಲ್ಲಿ ಅಡಗಿ?
ನನ್ನ ಕಾಡುತಿರುವೆ.
ಹೀಗೆ ಕಾಡಿ, ಕಾಡಿ
ನನ್ಹೇಕೆ ಒಳಗೊಳಗೆ ಕೊಲ್ಲುತಿರುವೆ ??
ನನ್ನ ಕಣಿವೆಯೆಂಬ
ಹೃದಯ ಕೊರೆದು
ನಿನ್ನ ಪ್ರೀತಿಧಾರೆ ಹರಿಸಿದೆ.
ಆ ಧಾರೆಗಾಗೆ
ದಾರಿಯಾದ ಧನ್ಯತೆಯಲಿ
ಮನವು ಮಿಡಿದಿದೆ !
ಮರುಭೂಮಿಯಲ್ಲಿ
ನಿನ್ನ ಪ್ರೇಮ ಪಶೆಗಾಗಿ ಕಾದ
ಮರಳ ಕಣವು ನಾನೆಲೆ !
ಆ ಮಳೇಲಿ ಮಿಂದ ಒಡನೆ
ಮೂಡಿದೆ, ಮನಗಳು
ಮಿಳಿತವಾದ ಹಿತ ಭಾವನೆ !!
ಕೊರೆವ ಚಳಿಯಲೂ
ಬೇಸಿಗೆಯ ಬಿಸಿ ನೀಡಲು
ನಿನ್ನ ಸವಿ ನೆನಪೆ ಸಾಕಿದೆ !
ಹೀಗಿದ್ದರೂನೂ
ನನ್ನ ಬಳಿಗೆ ಬಂದು
ಮತ್ತೆ ಮತ್ತೆ ಸೋಕಿದೆ !
ನಿನ್ನ ಪ್ರತಿ ಸೋಕಿನಲ್ಲೂ
ಪ್ರೀತಿಯ ಸೋಂಕಿದೆ !!
ನಿನ್ನ ಇರುವ
ನೆರವ ಬಯಸಿ
ಕಾಯುತಿರುವ
ಆಶಾವಾದಿ ನಾನೆಲೆ !
ಪುಟ್ಟ ಬಟ್ಟಲೊಳಗಿನ
ನೀರಿನ ನಿನ್ನ ನೀರವ ಸಾಗರದಲ್ಲಿ
ಅಲೆಯಾಗಿ ಮನಕೆ ಮುದನೀಡಲೆ ? !
ಕಣ್ಣೋಟದ ನಿನ್ನಾಟದಲ್ಲಿಯೇ
ಭಾವನೆಗಳ ಭಾರವಳೆದು,
ಮುನಿಸ ಮುರಿದು,
ಮೌನ ತೊರೆದು,
ನಿನ್ನ ಬಳಿಗೆ ಬಂದು
ಬಿಗಿದಪ್ಪಿ ಭರಸೆಳೆಯಲೆ ?!
ಏ ಹುಡುಗಿ
ನೀ ಹೀಗೆಲ್ಲಾ ಕಾಡಿದರೂ
ಸುಮ್ಮನಿದ್ದು,
ಸಮಾಜದ ದೃಷ್ಟಿಯಲ್ಲಿ
ಶಿಷ್ಠನಾಗಲೆ?
ಇಲ್ಲ ನಿನ್ನನೂ ಕಾಡಿ, ಕಿಚಾಯಿಸಿ
ನಿನ್ನಿಷ್ಟದ "ದುರುಳ"ನಾಗಲೆ??
Comments
ಉ: ನಿನ್ನಿಷ್ಟದ ದುರುಳ
In reply to ಉ: ನಿನ್ನಿಷ್ಟದ ದುರುಳ by makara
ಉ: ನಿನ್ನಿಷ್ಟದ ದುರುಳ