ನಿನ್ನೆ ಮಂಗಳೂರ 'ನೀರ ನಿಶ್ಚಿಂತೆ'

ನಿನ್ನೆ ಮಂಗಳೂರ 'ನೀರ ನಿಶ್ಚಿಂತೆ'

ಬರಹ

ನಿನ್ನೆ ಎರಡು ಕಾರಣಕ್ಕಾಗಿ ಮುಖ್ಯ ದಿನ. ಒಂದು ಅಂಧರ ಪಾಲಿಗೆ ಕಣ್ಣಾದ ಬ್ರೈಲ್ ಲಿಪಿ ನಿರ್ಮಾತೃ ಲೂಯಿ ಬ್ರೈಲ್ ನ ಜನ್ಮ ದ್ವಿಶತಮಾನೋತ್ಸವ. ಮತ್ತೊಂದು ಜಲಸಾಕ್ಷರತೆಯ ಬಗ್ಗೆ ಶ್ರೀ ಸಾಮಾನ್ಯರ ಕಣ್ಣು ತೆರೆಸುವ ನೀರ ನಿಶ್ಚಿಂತೆ ಕಾರ್ಯಕ್ರಮ ನಡೆದದ್ದು. ಕಾರ್ಯಕ್ರಮವು ಬೆಳಿಗ್ಗೆ ೧೦ ಗಂಟೆಗೆ ಮಂಗಳೂರಿನ ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಆಯೋಜಿಸಿ ಈ ಕಾರ್ಯಕ್ರಮದ ದಿಕ್ಸೂಚಿ ವಿಷಯಗಳನ್ನು ತಿಳಿಸಿಕೊಟ್ಟವರು ಶ್ರೀ ಅಡೂರು ಕೃಷ್ಣರಾವ್. ಮಂಗಳೂರು ಎಲ್ಲರೂ ಭಾವಿಸುವಂತೆ ಸಾಕಷ್ಟು ಮಳೆ ಬೀಳುವ ಪ್ರದೇಶ. ಆದರೆ ಸಮುದ್ರ ರಾಜನ ನೆಂಟು ಉಪ್ಪಿಗೆ ಬರ ಎಂಬಂತೆ ಬೇಸಿಗೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಳ್ಳೂತ್ತಿರುವ ನೀರಿನ ಅಭಾವದ ಕುರಿತು ಮಾತಾನಾಡಿದರು. ನೀರಿನ ಸರಿಯಾದ ಉಪಯೋಗದ ಕುರಿತು ಜನನಾಯಕರಿಗಿರುವ ನಿರ್ಲಕ್ಷ್ಯ, ನೀರನ್ನೇ ದಂಧೆ ಮಾಡಿಕೊಂಡಿರುವ ಹಲವಾರು ಹಿತಾಸಕ್ತಿಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಡರು.

ಅಡೂರ್ ಅವರು ಎತ್ತಿದ ಪ್ರಶ್ನೆಗಳ ಮೂಲಕ ಮಾತು ಆರಂಭಿಸಿದ ಖ್ಯಾತ ಅಂಕಣಕಾರ, ಜಲ ಸಾಕ್ಷರತಾ ಅರಿವು ಮೂಡಿಸುತ್ತಿರುವ ಶ್ರ್‍ಈ ಪಡ್ರೆಯವರು ಜನ ಸಾಮಾನ್ಯರು ತಮ್ಮ ತಮ್ಮ ನೆಲೆಗಳಲ್ಲಿ ಹೇಗೆ ಮಳೆ ನೀರನ್ನು ಬಳಸಿ ಜಲ ಮರುಪೂರಣದ ಮೂಲಕ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು.

ಇಂತಹ ಜಲ ಸಂಬಂಧಿ ಸಮಸ್ಯೆಗಳನ್ನು ಜನರ, ಜನನಾಯಕರ ಮನಮುಟ್ಟಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದವರು ಅರ್ಘ್ಯ ಸಂಸ್ಥೆಯ ಶಾರದಾ ಪ್ರಸಾದ್, ಸಂಪದದ ನಿರ್ವಾಹಕರಾದ ಹರಿಪ್ರಸಾದ್ ನಾಡಿಗ್ ಮತ್ತು ತಂತ್ರಜ್ಞ ವಸಂತ ಕಜೆ ಅವರು.

ಶಾರದ ಪ್ರಸಾದ್ ಅವರು ಅಂತರ್ಜಾಲದಲ್ಲಿರುವ ಕೆಲವು ಸಮುದಾಯ ವೆಬ್ ಸೈಟ್ ಗಳು ಸಂಕಷ್ಟದ ಸಮಯದಲ್ಲಿ ಹೇಗೆ ನೆರವಾಗಬಲುವು ಎಂಬುದನ್ನು ಮುಂಬೈ ಧಾಳಿಯ ಸಂದರ್ಭದ ಉದಾಹರಣೆಯೊಂದಿಗೆ ವಿವರಿಸಿದರು. ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ನಮ್ಮ ಸಂಶೋಧನೆಗಳ ನಿಖರತೆ ಹೆಚ್ಚಲಿದೆ. ಅಲ್ಲದೇ ಕೆಲವು ವೇಳೆ ಒಳ್ಳೆಯ ಸ್ನೇಹಿತನಂತೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಹರಿಪ್ರಸಾದ್ ಅವರು ಕನ್ನಡದಲ್ಲಿ ಮಾಹಿತಿ ವಿನಿಮಯ ಮತ್ತು ಅದಕ್ಕಿರುವ ತೊಡಕುಗಳ ಬಗ್ಗೆ ತಿಳಿಸುತ್ತಾ ಅಂತರ್ಜಾಲದಲ್ಲಿ ಕನ್ನಡ ಬಳಸುವುದನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು.

ಇಲ್ಲಿ ನೆರದಿದ್ದ ವಿವಿಧ ವಯೋಮಾನದ, ಬೌದ್ಧಿಕ ಸ್ತರದ ಎಲ್ಲರ ಮನಗೆದದ್ದು ಈ ಕಾರ್ಯಕ್ರಮದ ಮುಖ್ಯ ಅಂಶವಾಗಿತ್ತು. ಇನ್ನು ಮುಂದೆಯು ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಮತ್ತೊಮ್ಮೆ ಏರ್ಪಡಿಸುವ ಮೂಲಕ ಈಗ ಕಲಿತ ವಿಷಯಗಳಿಗೆ ಮತ್ತಷ್ಟು ಪೂರಕ ಮಾಹಿತಿ ಪಡೆದು ಕೊಳ್ಳುವುದೆಂದು ತೀರ್ಮಾನಿಸಲಾಯಿತು.