Skip to main content
ಕವನ
ಬಗೆ ಬಣ್ಣವಾಗಿ ಬಣ್ಣಿಸುವ
ಹೆಣ್ಣು ನೀನಲ್ಲವೆ!
ಕನಪು ಒನಪು ಒಯ್ಯಾರವೆಲ್ಲ
ನಿನಗೆ ಶೋಭೆ ಅಲ್ಲವೆ!
ನಾಕ ವೆಣ್ಣು ನರಕ ವೆಣ್ಣು
ಜಗದ ಜನರ ಮನದಲಿ
ನಿನ್ನ ಮೇಲೆ ಇವರ ಕಣ್ಣು
ಪಡೆದರೆರಡು ನಿನ್ನಲಿ!
ನಿಮಗ್ನವಾಗಿ ನಗ್ನ ಜಗದೆ
ನಾಕ ಮಾಡುವೆ
ಭಗ್ನ ಹೃದಯಕಗ್ನಿ ಇಟ್ಟು
ನರಕ ಮಾಡುವೆ
ನೀನೆ ನಾಕ ನೀನೆ ನರಕ
ನಿನ್ನೊಳೇಕ ನಾಕ ನರಕ!