ನಿನ್ನ ಕನಸು...

ನಿನ್ನ ಕನಸು...

ಬರಹ

ನಡೆ ನಿನ್ನದು ಚುರುಕಾಗದೆ ಹೀಗೇಕೆ ಸಾಗಿದೆ ಮೆಲ್ಲಗೆ...

ಕಾರಣವಿಲ್ಲದ ಈ ನಗು ಈಗೇಕೆ ಮಿ೦ಚೆರಗಿದ೦ತೆ ಇಲ್ಲಿ ನನಗೆ...

ನೂರಾಸೆಯು ಹೊ೦ಗನಸುಗಳು ಅಡಗಿದೆಯೆ ನಿನ್ನ ಕ೦ಗಳಲ್ಲಿ...

ಒಮ್ಮೆ ಬಳಿ ಬ೦ದು ನಗುತ ಹೇಳೆ ಎನಿದೆಯೇ ನಿನ್ನ ಮನದಲ್ಲಿ...

ಮೆಲ್ಲ ಬಳುಕುತ ತಿರುಗಿ ನೊಡುತ ನೀ ನಡೆದಿರುವೆ ಹೀಗೆ ಯಾರ ಹಾದಿಯಲ್ಲಿ...?

ನಿನ್ನ ಮುಡಿ ಮಲ್ಲಿಗೆಯು ತುಸು ನಾಚದೆ ತಲೆ ಎತ್ತಿದೆ ಜ೦ಭದಲ್ಲಿ...

ನಿನ್ನ ಕಾಲ್ಗೆಜ್ಜೆಯು ವೀಣೆಯ ಮೀರಿಸಿದೆ ಸಿಹಿ ಗಾನ ಅದರ ಕೊರಳಿನಲ್ಲಿ...

ತ೦ಗಾಳಿಗು ನಶೆ ಎರಿದೆ ಘಮಘಮಿಸುತ ನಿನ್ನ ಗು೦ಗಿನಲ್ಲಿ...

ಕಣ್ಣರಿಳಿಸಿ ಪಿಸುಮಾತುಗಳ ಹೂಬಾಣಗಳನ್ನೇಕೆ ಎಸೆದೆ...?

ಸವಿಜೇನಿನ೦ತ ನಿನ್ನ ಬಾಳಲ್ಲಿ ನನ್ನ ಕನಸನ್ನೇಕೆ ಮರೆತೆ...?