ನಿನ್ನ ನಾ ಹೇಗೆ ಮರೆಯಲಿ..?

ನಿನ್ನ ನಾ ಹೇಗೆ ಮರೆಯಲಿ..?

ಕವನ

 


ಮರೆವು ಮಾನವನಿಗೆ ವರದಾನವಂತೆ


ನಿನ್ನೆಗಳ ಕಹಿ ಮರೆತರೆ


ನಾಳೆಗಳು ಸಿಹಿ ತರುವುದಂತೆ


 


ನಿನ್ನ ನಾ ಹೇಗೆ ಮರೆಯಲಿ


 


ನಿನ್ನೆಗಳ ಕಹಿ ಮರೆತರೂ


ಸಿಹಿ ನೆನಪುಗಳನ್ನು ಮರೆಯಲಾದೀತೇ


ಸಿಹಿ ನೆನಪುಗಳಲ್ಲಿ ಮಿಂದೇಳುವಾಗ


ಕೊನೆಗೆ ನೀ ತಂದ ಕಹಿ ಮರೆಯಲಾದೀತೇ


 


ಮರೆಯಬೇಕೆಂದರೂ ಹೇಗೆ ನಾ ಮರೆಯಲಿ...?