ನಿನ್ನ ನೀ ಕೇಳಿಕೋ

ನಿನ್ನ ನೀ ಕೇಳಿಕೋ

ಕವನ

ಬೆಟ್ಟದೊಳಗೆ ಸಿಕ್ಕ ಬಿಲಕೆ

ಹಕ್ಕು ಪತ್ರ ಏತಕೆ

ಸುಟ್ಟ ಹೆಣದ ಹಾರು ಬೂದಿ

ಶೂನ್ಯವಾಯ್ತು ಏತಕೆ!

 

ಕೊಟ್ಟ ಮಾತು ಉಳಿಸಿ ಕೊಳಲು

ನಿಷ್ಠೆ ಕೊರತೆ ಏತಕೆ 

ದಿಟ್ಟ ನಡೆಯ ಧರ್ಮ ನದಿಯ

ತಡೆಯ ಬೇಕು ಏತಕೆ!

 

ಬೇರಿನೊಳಗೆ ಜೀವ ಧಾತು

ಕಳೆದು ಹೋಯ್ತು ಏತಕೆ

ದಾರಿ ದೀಪ ಉರಿಯುವಾಗ

ತಡೆವ ಹಠವು ಏತಕೆ!

 

ಮಾರಿ ಹೆಸರ ಹೇಳಿ ನೀವು

ಬಲಿಯ ಕೊಡುವಿರೇತಕೆ

ಹೋರಿ ಬರುವ ದಾರಿ ಮಧ್ಯೆ

ಏರಿ ನಿಲುವಿರೇತಕೆ!

 

ಘೋರ ಮನಕೆ ಸತ್ತ ಮೇಲೆ

ಗೋರಿ ಮನೆಯು ಏತಕೆ

ನೀರ ಮೇಲೆ ಹೋಮ ಹವನ

ಮಾಡ ಹೊರಟಿರೇತಕೆ!

-ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್