ನಿನ್ನ ನೆನಪು..."
ಬರಹ
ನಿನ್ನ ನೆನಪು..."
ನಿನ್ನ ನೆನಪು...
ನನ್ನ ಕಣ್ಣುಗಳಲ್ಲಿ ನೀರನ್ನು ಬರಿಸುವ
ನನ್ನ ಕಣ್ಣುಗಳಲ್ಲಿ ಪ್ರತಿಫಲಿಸುತಿರುವ ಆ ನಿನ್ನ ಚಿತ್ರ
ನನ್ನ ಮನದಂಗಳದಿ ಮನೆ ಮಾಡಿರುವ
ನಿನ್ನ ನೆನಪು...
ನನಗೆ ಯಾವಾಗಲೂ ಒಳ್ಳೆಯದ್ದನ್ನೇ ಬಯಸುವ
ನೀ ನನ್ನಿಂದ ದೂರ ಇದ್ದರೂ
ನನಗೆ ಬದುಕಲು ಆಧಾರವಾಗಿರುವ
ನಿನ್ನ ನೆನಪು...
ಕಾಲ ಗರ್ಭದಲ್ಲಿ ಆವಿತುಕೊಂಡಿರುವ
ಮರೆಯಲು ಬಯಸಿದರೂ ಮರೆಯಲಾಗದ
ನಿನ್ನ ನೆನಪು...
ನನ್ನ ಜೀವನದ ಮಾರ್ಗದರ್ಶಿಯಾಗಿ
ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ
ದು:ಖದಿಂದ ಸುಖದ ಕಡೆಗೆ ಕೊಂಡೊಯ್ಯುವ
ನಿನ್ನ ನೆನಪು...
: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ