ನಿನ್ನ ಪ್ರೀತಿಯಲಿ... ಒಂದು ಗಝಲ್
ಕವನ
ನನ್ನದೆಯ ದೀಪವಾಗಿ
ಉರಿದೆಯಾ ನೀನು|
ಭಾವಲೋಕ ನೌಕೆಯಾಗಿ
ತೇಲಿದೆಯಾ ನೀನು||
ಜೀವತಂತಿ ಮೀಟಿದೆ
ಒಲವ ರಾಗದೊಳು|
ಸುಮದ ಗಂಧವಾಗಿ
ಬೀರಿದೆಯಾ ನೀನು||
ಚಂದ್ರಮನಂತೆಯೆ
ಚಕೋರಿಗೆ ಕಾದಿರುವೆ|
ಕ್ಷೀರದೊಳು ಘೃತವಾಗಿ
ಸೇರಿದೆಯಾ ನೀನು||
ನಿನ್ನಲ್ಲಿ ಪ್ರೀತಿಯೆಂಬ
ಪ್ರತೀಕ್ಷೆಯನ್ನು ಇಟ್ಟಿರುವೆ|
ಭವದಲ್ಲಿ ಜೋಡಿಯಾಗಿ
ಕೂಡಿದೆಯಾ ನೀನು||
ಪುಷ್ಪದಂಬುವ ಬೀಸುತಿದೆ
ಅಭಿನವನ ಕವಿತೆ|
ಬಾನಿನಲ್ಲಿ ಹಕ್ಕಿಯಾಗಿ
ಹಾರಿದೆಯಾ ನೀನು||
-*ಶಂಕರಾನಂದ ಹೆಬ್ಬಾಳ*
ಚಿತ್ರ್
